ಕೋಲಾರ: ಕುಡಿದ ಮತ್ತಿನಲ್ಲಿ ಹೆಂಡತಿ ತಲೆಗೆ ಉರಳು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಅರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕು ಜೋಡಿಕೃಷ್ಣಾಪುರ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಗ್ರಾಮದ ಸಿದ್ದು (36) ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ವಿಕೃತಿ ಮೆರೆದ ಗಂಡ. ಪತ್ನಿ ನಾಗಮಣಿ (28) ಕೊಲೆಯಾದ ಹೆಂಡತಿ.
Advertisement
Advertisement
ಕುಡಿದ ಮತ್ತಿನಲ್ಲಿ ತಲೆಯ ಮೇಲೆ ಕಲ್ಲು ಹಾಕಿದ ನಂತರ ಅರೋಪಿ ಗಂಡ ಪೊಲೀಸರಿಗೆ ಶರಣಾಗಿದ್ದಾನೆ. ದಿನ ನಿತ್ಯ ಕುಡಿದು ಬರುತ್ತಿದ್ದರಿಂದ ಗಂಡ ಹೆಂಡತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ದಂಪತಿಗಳಿಗೆ 5 ಹಾಗೂ 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ರಾತ್ರಿ ತಲೆ ಮೇಲೆ ಉರುಳು ಕಲ್ಲು ಹಾಕಿ, ಚಾಕುವಿನಿಂದ ಇರಿದು ವಿಕೃತ ಮೆರೆದು ನಂತರ ಪೊಲೀಸರಿಗೆ ಶರಣಾಗಿದ್ದಾನೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv