ಬೆಂಗಳೂರು: ಮಹಾಶಿವರಾತ್ರಿ (Maha Shivaratri) ದಿನದಂದೇ ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಕೊಂದು, ಪತಿ ನೇಣಿಗೆ ಶರಣಾಗಿರುವ ಘಟನೆ ತಿಗಳರಪಾಳ್ಯ (Thigalarapalya) ಮುಖ್ಯ ರಸ್ತೆಯ ನ್ಯೂ ಇಂಡಿಯನ್ ಸ್ಕೂಲ್ ಬಳಿ ಘಟನೆ ನಡೆದಿದೆ.
ಪತಿ ಸುರೇಶ್ (40), ಪತ್ನಿ ಮಮತಾ (33) ಮೃತ ದಂಪತಿ. ಪತ್ನಿಯ ಕುತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸುರೇಶ್, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ರಜೌರಿಯಲ್ಲಿ ಸೇನಾ ವಾಹನದ ಮೇಲೆ ದಾಳಿ – ಪಠಾಣ್‌ಕೋಟ್‌ನಲ್ಲಿ ಅಕ್ರಮ ನುಸುಳುಕೋರನ ಹತ್ಯೆ
ಜಗಳ ಹಿನ್ನೆಲೆ ಗಂಡ ಹೆಂಡತಿ ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ವಾರದ ಹಿಂದೆ ಇಬ್ಬರೂ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ಅಟೆಂಡ್ ಮಾಡಿದ್ದರು.
ಆಟೋ ಡ್ರೈವರ್ ಆಗಿದ್ದ ಸುರೇಶ್ ಸರಿಯಾಗಿ ಕೆಲಸ ಮಾಡದೇ, ಸಂಸಾರ ನೋಡಿಕೊಳ್ಳದ ಹಿನ್ನೆಲೆ ದಂಪತಿ ನಡುವೆ ಪ್ರತಿನಿತ್ಯ ಗಲಾಟೆಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಕಳೆದ 9 ತಿಂಗಳಲ್ಲಿ 30 ಅಪ್ರಾಪ್ತೆಯರು ಗರ್ಭಿಣಿ – 14 ಬಾಲಕಿಯರಿಗೆ ಹೆರಿಗೆ!
ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.