ಲಕ್ನೋ: ಐದು ತಿಂಗಳ ಹಿಂದೆ ಮದುವೆಯಾದ ವ್ಯಕ್ತಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಗುರುಗ್ರಾಮನಲ್ಲಿ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ಪಂಕಜ್ ಶರ್ಮಾ ಮೇ ತಿಂಗಳಲ್ಲಿ ಕೋಮಲ್ಳನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ನಂತರ ಆಕೆ ಬೇರೆಯವನನ್ನು ಪ್ರೀತಿಸುತ್ತಿದ್ದಳು ಎನ್ನುವ ವಿಚಾರ ಶರ್ಮಾನಿಗೆ ತಿಳಿದಿದೆ. ನಂತರ ಮದುವೆಯಾದ ದಿನದಿಂದಲೂ ಆಕೆ ಗಂಡ ಜೊತೆಗಾಗಲಿ, ಗಂಡನ ಮನೆಯವರೊಂದಿಗಾಗಲಿ ಮಾತನಾಡಿರಲಿಲ್ಲ. ಇದರಿಂದ ಆತನಿಗೆ ಬಹಳ ಗೊಂದಲವಾಗಿತ್ತು. ಇದನ್ನೂ ಓದಿ: ನೀಟ್ ಫಲಿತಾಂಶ ಪ್ರಕಟ- ಇ-ಮೇಲ್ಗೇ ರಿಸಲ್ಟ್
ಮದುವೆಯಾದ ಮೇಲೂ ತನ್ನ ಪ್ರೇಮಿ ಪಿಂಟು ಜೊತೆ ಜೀವನ ನಡೆಸಬೇಕು ಅಂದುಕೊಂಡಿದ್ದಳು. ಇದನ್ನು ತಿಳಿದ ಆಕೆಯ ಗಂಡ ಪಂಕಜ್ ಶರ್ಮ ಈ ವಿಷಯವನ್ನು ಕೋಮಲ್ಳ ತಂದೆ, ತಾಯಿಗೆ ಹೇಳಿದರು. ಅವರು ತಮ್ಮ ಮಗಳಿಗೆ ಬುದ್ಧಿ ಹೇಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಆಕೆ ತನ್ನ ಪ್ರೇಮಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾಳೆ. ಇದನ್ನೂ ಓದಿ: ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ
ಪಂಕಜ್, ಕೋಮಲ್ ಹಾಗೂ ಪಿಂಟುವನ್ನು ಕರೆಸಿ ಮಾತನಾಡಿದ್ದಾನೆ. ಆಗ ಕೋಮಲ್ ತಾನು ಪಂಕಜ್ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕೋಮಲ್ ಸ್ಪಷ್ಟವಾಗಿ ಹೇಳಿದ್ದರಿಂದ ಪಂಕಜ್ ತಾನೇ ಮುಂದೆ ನಿಂತು ಕೋಮಲ್ ಹಾಗೂ ಪಿಂಟುವಿನ ಮದುವೆ ಮಾಡಿಸುವುದಾಗಿ ಹೇಳಿದರು. ಮರುದಿನವೇ ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿದ್ದಾನೆ.