ಲಕ್ನೌ: ಪತ್ನಿ ತನ್ನ ತವರು ಮನೆಯಲ್ಲಿ 10 ನಿಮಿಷ ತಡ ಮಾಡಿದ್ದಕ್ಕೆ ಪತಿ ಆಕೆಗೆ ಫೋನಿನಲ್ಲೇ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಈಟಾದಲ್ಲಿ ನಡೆದಿದೆ.
ಅಫ್‍ರೋಜ್ ಪತ್ನಿ ತಲಾಖ್ ನೀಡಿದ ಪತಿ. ಅಫ್‍ರೋಜ್ ಹೈದರಾಬಾದ್‍ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದೂವರೆ ವರ್ಷದ ಹಿಂದೆ ಅಫ್‍ರೋಜ್, ಶಂಬುಲ್ ಬೇಗಂಳನ್ನು ಮದುವೆ ಆಗಿದ್ದನು. ಮದುವೆಯ ನಂತರ ಆತ ವರದಕ್ಷಿಣೆ ನೀಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ.
Advertisement
ಶಂಬುಲ್ ಬೇಗಂ ಜನವರಿ 18ರಂದು ಅನಾರೋಗ್ಯದಿಂದ ಬಳುತ್ತಿದ್ದ ತನ್ನ ಅಜ್ಜಿಯನ್ನು ನೋಡಲು ತವರು ಮನೆಗೆ ಹೋಗಿದ್ದಳು. ಅಫ್‍ರೋಜ್ ತನ್ನ ಪತ್ನಿ ತವರು ಮನೆಗೆ ಹೋಗಲು ಕೇವಲ 30 ನಿಮಿಷ ಕಾಲಾವಕಾಶ ನೀಡಿದ್ದನು. ಆದರೆ ಶಂಬುಲ್ 10 ನಿಮಿಷ ತಡ ಮಾಡಿದ್ದಾಳೆ. ಆಗ ಅಫ್‍ರೋಜ್ ತನ್ನ ಸಹೋದರನನ್ನು ಪತ್ನಿಯ ತವರು ಮನೆಗೆ ಕಳುಹಿಸಿ ಅಲ್ಲಿ ಶಂಬುಲ್ ಜೊತೆ ಫೋನಿನಲ್ಲಿ ಮಾತನಾಡಿಸುವುದಾಗಿ ಹೇಳಿದ್ದಾನೆ. ಬಳಿಕ ಅಫ್‍ರೋಜ್ ಫೋನಿನಲ್ಲಿ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.
Advertisement
Advertisement
ಒಂದೂವರೆ ವರ್ಷದ ಹಿಂದೆ ನನ್ನ ಪೋಷಕರು ಶಂಬುಲ್ ಜೊತೆ ಮದುವೆ ಮಾಡಿಸಿದ್ದರು. ಮದುವೆ ಆದ ದಿನದಿಂದ ಈವರೆಗೂ ನನ್ನ ಪತಿ ಹಾಗೂ ಆತನ ಮನೆಯವರು ನನಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ಆದರೆ ನನ್ನ ತವರು ಮನೆಯವರು ವರದಕ್ಷಿಣೆ ನೀಡಲು ನಿರಾಕರಿಸಿದ್ದರು. ಹಾಗಾಗಿ ನನ್ನ ಪತಿ ನನಗೆ ತವರು ಮನೆಗೆ ಹೋಗಲು ಅನುಮತಿ ನೀಡುತ್ತಿರಲಿಲ್ಲ ಎಂದು ಶಂಬುಲ್ ಪೊಲೀಸರ ಬಳಿ ಹೇಳಿದ್ದಾಳೆ.
Advertisement
ಫೋನಿನಲ್ಲಿ ತಲಾಖ್ ಪಡೆದ ಬಳಿಕ ನಾನು ನನ್ನ ಪತಿಯ ಮನೆಗೆ ಹೋದೆ. ಅಲ್ಲಿ ನನ್ನ ಪತಿ ಹಾಗೂ ಆತನ ಕುಟುಂಬದವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಂಬುಲ್ ಹೇಳಿದ್ದಾಳೆ. ಪೊಲೀಸರು ಈ ಪ್ರಕರಣವನ್ನು ತಲಾಖ್ ಎಂದು ದಾಖಲಿಸಿಲ್ಲ. ವರದಕ್ಷಿಣೆ ಕಿರುಕುಳ ಎಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ರೋಮಸಿಯಾ ಮೌರ್ಯ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv