Connect with us

Latest

ತಲಾಖ್ ನೀಡಿದ ಪತಿ- ಮತ್ತೊಂದು ಮದ್ವೆಯಾಗಿದ್ದಕ್ಕೆ ಪತಿ, ಮಾವ, ಗ್ರಾಮಸ್ಥರಿಂದ ಮಹಿಳೆ ಮೇಲೆ ಗ್ಯಾಂಗ್ ರೇಪ್

Published

on

ಪಾಟ್ನಾ: ಪತಿ ತಲಾಖ್ ನೀಡಿದ ಬಳಿಕ ಮಹಿಳೆ ಮತ್ತೊಂದು ಮದುವೆ ಆಗಿದ್ದಕ್ಕೆ ಆಕೆಯ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಅಮಾನವೀಯ ಘಟನೆ ಉತ್ತರಪ್ರದೇಶ ರಾಜ್ಯದ ಮುರದಾಬಾದ್ ನಲ್ಲಿ ನಡೆದಿದೆ.

ಪತಿ ತಲಾಖ್ ನೀಡಿದ ಬಳಿಕ ಮಹಿಳೆ ತನ್ನ ಎರಡನೇ ಪತಿ ಜೊತೆ ಅಲಹಾಬಾದ್ ಕೋರ್ಟ್ ಗೆ ತೆರಳುತ್ತಿದ್ದರು. ಮಹಿಳೆ ಎರಡನೇ ಪತಿ ಜೊತೆ ಬರೇಲಿ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ನಿಲ್ದಾಣಕ್ಕೆ ಬಂದ ಪತಿ ಮತ್ತು ಆತನ ಸಹಚರರು ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.

ಮಹಿಳೆಯನ್ನು ಡಿಗ್ರಿ ಕಾಲೇಜಿನಲ್ಲಿ ಕೂಡಿ ಹಾಕಿ ಪತಿ, ಮಾವ ಮತ್ತು ಗ್ರಾಮದ ಹಿರಿಯರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಿರಂತರವಾಗಿ 8 ದಿನಗಳ ಕಾಲ ಮಹಿಳೆಯ ಮೇಲೆ ಅತ್ಯಚಾರ ನಡೆಸಿದ್ದಾರೆ. ಆರೋಪಿಗಳು ಪ್ರತಿದಿನ ಜಾಗವನ್ನು ಬದಲಿಸುತ್ತಾ ಅತ್ಯಾಚಾರ ನಡೆಸಿದ್ದಾರೆ. ಕೊನೆಗೆ 8ನೇ ದಿನ ಮಹಿಳೆ ಕಾಮುಕರಿಂದ ತಪ್ಪಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಂದು ವರ್ಷದ ಹಿಂದೆ ಮೈನಾಟೇರ್ ಗ್ರಾಮದ ವ್ಯಕ್ತಿಯೊಂದಿಗೆ ಮಹಿಳೆ ಮದುವೆ ಆಗಿತ್ತು. ಆಗಸ್ಟ್ 17ರಂದು ಪತಿ ಆಕೆಗೆ ತಲಾಖ್ ನೀಡಿದ್ದನು. ತಲಾಖ್ ಬಳಿಕ ಮಹಿಳೆ ಅದೇ ಗ್ರಾಮದ ಯುವಕನೊಂದಿಗೆ ಎರಡನೇ ಮದುವೆ ಆಗಿದ್ದರು.

ಸದ್ಯ ಕುಂದರಕಿ ಠಾಣೆ ಪೊಲೀಸರಿಗೆ ಪ್ರಕರಣದ ಕುರಿತು 24 ಗಂಟೆಯಲ್ಲಿ ವರದಿ ನೀಡಬೇಕು. ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಬೇಕೆಂದು ಎಸ್‍ಎಸ್‍ಪಿ ರವೀಂದ್ರ ಆದೇಶಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *