ಕಲಬುರಗಿ: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಸೊಂತ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.
ದೀಪಾಲಿ (27) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಏಳು ವರ್ಷದ ಹಿಂದೆ ಶ್ರೀಕಾಂತ್ ಮಾಲದಾರ ಎಂಬವನ ಜೊತೆ ದೀಪಾಲಿ ಮದುವೆಯಾಗಿತ್ತು. ಮದುವೆ ಆದಾಗಿನಿಂದಲೂ ಗಂಡನ ಮನೆಯವರು ದೀಪಾಲಿಗೆ ತವರಿಂದ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದೆಲ್ಲವನ್ನು ಸಹಿಸಿಕೊಂಡು ದೀಪಾಲಿ ಶ್ರೀಕಾಂತ್ ಜೊತೆ ಜೀವನ ನಡೆಸುತ್ತಿದ್ದರು. ಆದರೆ ಕಳೆದ ಹಲವು ದಿನಗಳಿಂದ ಗಂಡ ಹಾಗೂ ಅವನ ಮನೆಯವರು ಗೃಹಿಣಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟಿದ್ದಾರೆ. ಇದರಿಂದ ಬೇಸತ್ತಿದ್ದ ದೀಪಾಲಿ ಮನನೊಂದು ಸೋಮವಾರದಂದು ನೇಣಿಗೆ ಶರಣಾಗಿದ್ದಾರೆ.
Advertisement
ಪತಿ, ಅತ್ತೆ ವಂದನಾ, ಮಾವ ರಮೇಶ ಸೇರಿದಂತೆ ಏಳು ಜನರ ವಿರುದ್ಧ ದೀಪಾಲಿ ಕುಟುಂಬಸ್ಥರು ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv