ಬೀಜಿಂಗ್: ವ್ಯಕ್ತಿಯೊಬ್ಬ ಇನ್ಶುರೆನ್ಸ್ ಹಣದ ಆಸೆಯಿಂದ ಸ್ವತಃ ತಾನೇ ಸತ್ತಿದ್ದೇನೆ ಎಂದು ಬಿಂಬಿಸಿದ್ದಾನೆ. ಆದರೆ ಪತ್ನಿ ಮತ್ತು ಮಕ್ಕಳು ನಿಜವಾಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ.
ಈ ಘಟನೆ ಚೀನಾದ ದಕ್ಷಿಣ ಪ್ರಾಂತ್ಯದಲ್ಲಿ ನಡೆದಿದೆ. 34 ವರ್ಷ ವಯಸ್ಸಿನ ವ್ಯಕ್ತಿ ಇಂತಹ ನಾಟಕವಾಡಿ, ಪತ್ನಿ-ಮಕ್ಕಳ ಸಾವಿಗೆ ಕಾರಣವಾಗಿದ್ದಾನೆ. ಈತ ಇನ್ಶುರೆನ್ಸ್ ಹಣದ ಆಸೆಗಾಗಿ ತಾನು ಮೃತಪಟ್ಟಿದ್ದೇನೆ ಎಂದು ಎಲ್ಲರನ್ನು ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಈತನ ಪತ್ನಿ ನಿಜವಾಗಿಗೂ ಪತಿ ಮೃತಪಟ್ಟಿದ್ದಾನೆ ಎಂದು ನೊಂದು ಮಕ್ಕಳೊಂದಿಗೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ವ್ಯಕ್ತಿಯೊಬ್ಬ 2018ರ ಸೆಪ್ಟೆಂಬರ್ ನಲ್ಲಿ ಒಂದು ಕೋಟಿ ರೂಪಾಯಿಯ ಇನ್ಶುರೆನ್ಸ್ ಪಾಲಿಸಿಯನ್ನು ತೆಗೆದುಕೊಂಡಿದ್ದನು. ಆ ವಿಚಾರವನ್ನ ಆತ ತನ್ನ ಪತ್ನಿಗೂ ತಿಳಿಸಿರಲಿಲ್ಲ. ಸಂಸಾರದಲ್ಲಿ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿದ್ದನು. ಇದರಿಂದ ಬೇಸತ್ತ ಆತ ಇನ್ಶುರೆನ್ಸ್ ಹಣ ಪಡೆದುಕೊಳ್ಳಲು ಒಂದು ಪ್ಲಾನ್ ಮಾಡಿದ್ದಾನೆ.
Advertisement
ತಾನು ಮೃತಪಟ್ಟಂತೆ ನಾಟಕ ಮಾಡಿ ಇನ್ಶುರೆನ್ಸ್ ಹಣವನ್ನು ತೆಗೆದುಕೊಳ್ಳುವುದು ಆತನ ಪ್ಲಾನ್ ಆಗಿತ್ತು. ಅದೇ ಪ್ರಕಾರ ಅವನು ತನ್ನ ಸಹೋದ್ಯೋಗಿಗಳಿಂದ ಒಂದು ಕಾರನ್ನು ಬಾಡಿಗೆಗೆ ಪಡೆದುಕೊಂಡು ನೀರಿನಲ್ಲಿ ಮುಳುಗಿಸಿದ್ದಾನೆ. ಆ ಮೂಲಕ ತಾನು ಮೃತಪಟ್ಟಂತೆ ಸಂದರ್ಭ ಸೃಷ್ಟಿಮಾಡಿದ್ದಾನೆ. ಇದರಿಂದಾಗಿ ಇನ್ಶುರೆನ್ಸ್ ಹಣ ತನ್ನ ಕುಟುಂಬದ ಕೈಸೇರುತ್ತೆ ಅಂತ ಅಂದುಕೊಂಡಿದ್ದನು. ಆದರೆ ಅಲ್ಲಿ ಆಗಿದ್ದೆ ಬೇರೆ.
Advertisement
ಇತ್ತ ಪತಿಯ ಸಾವಿನ ಸುದ್ದಿ ತಿಳಿದ 31 ವರ್ಷದ ಡೈ ಗುಹಾವ್ ಖಿತ್ತನೆಗೆ ಒಳಗಾಗಿದ್ದು, ಪತಿ ಇಲ್ಲದೇ ತನ್ನ ಇಬ್ಬರು ಮಕ್ಕಳನ್ನು ಹೇಗೆ ಸಾಕುವುದು ಎಂದು ಚಿಂತಿಸಿದ್ದಾರೆ. ಹೀಗೆ ತನ್ನ ಮುಂದಿನ ಜೀವನವನ್ನು ನೆನೆದು, ಪರಿಸ್ಥಿತಿಯ ಬಗ್ಗೆ ಒಂದು ಸುದೀರ್ಘ ಪತ್ರವೊಂದನ್ನು ಬರೆದು ತನ್ನಿಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿ ಸಮೀಪದ ಕೊಳವೊಂದಕ್ಕೆ ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮರುದಿನ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ತಿಳಿದ ಪತಿ ತನ್ನ ತಪ್ಪಿನ ಅರಿವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯಕ್ಕೆ ಪತ್ನಿ ಮತ್ತು ಮಕ್ಕಳ ಸಾವಿಗೆ ಕಾರಣನಾದ ವ್ಯಕ್ತಿ ವಿರುದ್ಧ ಪೊಲೀಸರು ವಂಚನೆ ಮತ್ತು ಆಸ್ತಿ ಹಾನಿಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv