ಭೋಪಾಲ್: ಪತ್ನಿಗೆ ದಪ್ಪಗಿದ್ದಾಳೆ ಹಾಗೂ ಎಲ್ಲರೂ ರೇಗಿಸುತ್ತಾರೆ ಎಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ಪತಿಯೊಬ್ಬ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾನೆ.
ಪತಿ ಪ್ರೊಫೆಸರ್ ಆಗಿದ್ದು, 10 ವರ್ಷಗಳ ಹಿಂದೆ ದಂಪತಿಗೆ ಮದುವೆಯಾಗಿತ್ತು. ಮದುವೆಯ ವೇಳೆ ಪತ್ನಿ 56 ತೂಕ ಇದ್ದಳು. ಮದುವೆ ಆಗಿ ಗಂಡು ಮಗು ಜನಿಸಿದ ನಂತರ ಪತ್ನಿಯ ದೇಹದ ತೂಕ ಏಕಾಏಕಿ 102 ಕೆಜಿಗೆ ಏರಿಕೆಯಾಗಿದೆ.
Advertisement
ನನ್ನ ಪತ್ನಿಯ ದೇಹದ ತೂಕ ಹೆಚ್ಚಾಗುತ್ತಿದ್ದಾಗ ನಾನು ಆಕೆಗೆ ತೂಕ ಕಡಿಮೆ ಮಾಡಿಕೋ ಎಂದು ಎಚ್ಚರಿಸಿದೆ. ಆದರೆ ಆಕೆ ನನ್ನ ಮಾತನ್ನು ಕೇಳಲಿಲ್ಲ. ಹಾಗಾಗಿ ಈಗ ಆಕೆಯ ತೂಕ 102 ಕೆಜಿಗೆ ಹೆಚ್ಚಾಗಿದೆ ಎಂದು ಪತಿ ಕೌಟುಂಬಿಕ ನ್ಯಾಯಾಲಯ ಕೌನ್ಸಿಲರ್ ಸರೀತಾ ರಾಜಾನಿ ಬಳಿ ಹೇಳಿಕೊಂಡಿದ್ದಾನೆ.
Advertisement
Advertisement
ನನ್ನ ಪತ್ನಿ ನನ್ನ ಯಾವುದೇ ಮಾತನ್ನು ಕೇಳುತ್ತಿಲ್ಲ. ಅಲ್ಲದೆ ಆಕೆ ದೇಹದ ತೂಕ ಕಡಿಮೆ ಮಾಡಿಕೊಳ್ಳುವಂತೆ ನಾನು ಇಲ್ಲಿಯವರೆಗೆ 5 ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದೇನೆ ಎಂದು ಪ್ರೊಫೆಸರ್ ತನ್ನ ನೋವನ್ನು ತೋಡಿಕೊಂಡಿದ್ದಾನೆ.
Advertisement
ನನಗೆ ನನ್ನ ಪತ್ನಿಯಿಂದ ವಿಚ್ಛೇದನ ಬೇಕು. ಪತ್ನಿಗಾಗಿ ನಾನು 25 ಲಕ್ಷ ಹಣವನ್ನು ನೀಡಲು ಸಿದ್ಧನಿದ್ದೇನೆ. ಅಲ್ಲದೆ ಮಗುವಿನ ಖರ್ಚುಗಳನ್ನು ಸಹ ನಾನು ನೋಡಿಕೊಳ್ಳುತ್ತೇನೆ ಎಂದು ಪತಿ ತಿಳಿಸಿದ್ದಾನೆ.