ಕೋಲಾರ: ಪ್ರೀತಿಸಿ ಮದುವೆಯಾಗಿ ಎರಡು ತಿಂಗಳು ಕಳೆಯುವ ಮುನ್ನವೇ ನಾಪತ್ತೆಯಾದ ಪತಿಗಾಗಿ ಪತ್ನಿ ಏಕಾಂಗಿ ಹೋರಾಟಕ್ಕೆ ಮುಂದಾಗಿದ್ದು, ಈಗ ದಯಾಮರಣಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಬಂಟಹಳ್ಳಿ ಗ್ರಾಮದ ಪ್ರತಿಮಾ ಹೋರಾಟ ಮಾಡುತ್ತಿರುವ ಗೃಹಿಣಿ. ಶಶಿಕುಮಾರ್ ಮತ್ತು ಪ್ರತಿಮಾ ಮೂರು ವರ್ಷಗಳಿಂದ ಒಬ್ಬರನೊಬ್ಬರನ್ನು ಪ್ರೀತಿಸುತ್ತಿದ್ದರು. ಇವರಿಬ್ರು ಜೊತೆಯಾಗಿರುವ ಫೋಟೋಗಳನ್ನು ಕೆಲವರು ಫೇಸ್‍ಬುಕ್‍ನಲ್ಲಿ ಹಾಕಿದ್ದರಿಂದ ಮನೆಯಲ್ಲಿ ಇಬ್ಬರ ಪ್ರೀತಿಯ ವಿಚಾರ ಬೆಳಕಿಗೆ ಬಂದಿತ್ತು. ಶಶಿಕುಮಾರ್ ಪೋಷಕರು ದಲಿತ ಹುಡುಗಿ ಎಂದು ಮದುವೆಗೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಪೊಲೀಸ್ ಠಾಣೆ ಆವರಣದಲ್ಲಿರುವ ದೇವಾಲಯದಲ್ಲಿ ಗ್ರಾಮದ ಹಿರಿಯರು ಮದುವೆ ಮಾಡಿಸಿದ್ದರು.
ಆದ್ರೆ ಮದುವೆಯಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಶಶಿಕುಮಾರ್ ನನ್ನು ಆತನ ಪೋಷಕರು ಅಪಹರಿಸಿದ್ದಾರೆ ಎನ್ನಲಾಗಿದೆ. ಸದ್ಯ ಪ್ರತಿಮಾ ಕಾಣೆಯಾಗಿರುವ ಪತಿಯನ್ನು ಹುಡುಕಿಕೊಡುವಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.