ಹುಬ್ಬಳ್ಳಿ: ಹೆಂಡತಿ (Wife) ಕಾಟಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಹೆಂಡತಿ ಕಿರುಕುಳ ತಾಳಲಾರದೆ ಗಂಡ (Husband) ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹುಬ್ಬಳ್ಳಿಯ (Hubballi) ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಪೀಟರ್ ಎಂದು ಗುರುತಿಸಲಾಗಿದೆ. ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಸಾವಿಗೂ ಮುನ್ನ ಡೆತ್ ನೋಟ್ ಬರೆದಿರುವ ಪೀಟರ್, `ಡ್ಯಾಡಿ ಆಯಮ್ ಸಾರಿ, ಪಿಂಕಿ ಇಸ್ ಕಿಲ್ಲಿಂಗ್ ಮೀ ಸೀ ವಾಂಟ್ ಮೈ ಡೆತ್ ಎಂದು ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
Advertisement
ಶವ ಪೆಟ್ಟಿಗೆ ಮೇಲೆ `ಹೆಂಡತಿ ಟಾರ್ಚರ್‍ನಿಂದ ಸಾವು’ ಎಂದು ಬರೆಸುವಂತೆ ಡೆತ್ ನೋಟ್ ಉಲ್ಲೇಖಿಸಲಾಗಿದೆ. ಪೀಟರ್ ಆಸೆಯಂತೆ ಶವ ಪೆಟ್ಟಿಗೆ ಮೇಲೆ `ಮೈ ಡೆತ್ ಬಿಕಾಸ್ ಆಫ್ ಮೈ ವೈಫ್ ಟಾರ್ಚರ್’ ಎಂದು ಕುಟುಂಬಸ್ಥರು ಬರೆಸಿಕೊಂಡಿದ್ದಾರೆ.
Advertisement
Advertisement
ಪೀಟರ್ ಪತ್ನಿ ಖಾಸಗಿ ಶಾಲೆ ಶಿಕ್ಷಕಿಯಾಗಿದ್ದರು. ಇತ್ತೀಚಿಗೆ ಬೇರೆ ವ್ಯಕ್ತಿ ಜೊತೆಗೆ ಸುತ್ತಾಟ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ, ನನ್ನ ಜೀವನ ನನ್ನಿಷ್ಟ ಎಂದು ಉತ್ತರ ನೀಡಿದ್ದರು ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
Advertisement
ಹಲವಾರು ತಿಂಗಳು ಪತಿಯಿಂದ ದೂರವಿದ್ದ ಮಹಿಳೆ, ವಿಚ್ಚೇದನಕ್ಕೆ (Divorce) ಅರ್ಜಿ ಹಾಕಿದ್ದಳು. ಇಂದು (ಸೋಮವಾರ) ಈ ಬಗ್ಗೆ ಕೋರ್ಟ್‍ನಲ್ಲಿ ವಿಚಾರಣೆ ಇತ್ತು. ಆಕೆ ವಕೀಲರ ಮೂಲಕ 20 ಲಕ್ಷ ರೂ ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.