ಲಕ್ನೋ: ಪ್ರಿಯಕರನೊಂದಿಗೆ (Lover) ಓಡಾಡುತ್ತಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪತಿಯೊಬ್ಬ (Husband) ನಡುರಸ್ತೆಯಲ್ಲಿ ಥಳಿಸಿರುವ ಘಟನೆ ಆಗ್ರಾದಲ್ಲಿ (Agra) ನಡೆದಿದೆ.
ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಓರ್ವ ಮಗಳಿದ್ದಾಳೆ(Daughter). ಉದ್ಯಮಿಯೊಂದಿಗೆ(Businessman) ತನ್ನ ಹೆಂಡತಿ (Wife) ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ವ್ಯಕ್ತಿಗೆ ಮೊದಲೇ ತಿಳಿದಿತ್ತು. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಹೀಗಿದ್ದರೂ ಭಾನುವಾರ ಪತ್ನಿ ಯಾರಿಗೂ ತಿಳಿಸದೇ ಮನೆಯಿಂದ ಹೊರಗೆ ಹೋಗಿದ್ದಾಳೆ. ಅವಳನ್ನು ಹೇಗಾದರೂ ಕಂಡು ಹಿಡಿಯಲೇ ಬೇಕೆಂದು ನಿರ್ಧರಿಸಿ ವ್ಯಕ್ತಿ ತನ್ನ ಪುತ್ರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹುಡುಕಾಟ ನಡೆಸಲು ಆರಂಭಿಸಿದ್ದಾನೆ.
Advertisement
प्रेमी के साथ स्कूटी पर घूम रही पत्नी को पति ने पकड़ा, बीच सड़क पर हुआ हंगामा
मामला आगरा के सिकंदरा थाना क्षेत्र का है। पुलिस ने किया प्रेमी का 151 में चालान किया है। pic.twitter.com/I8uVwa3FpB
— Rahul Ahir (@rahulahir) September 12, 2022
Advertisement
ಈ ವೇಳೆ ಕೈಲಾಸ ಮಂದಿರ ರಸ್ತೆಯ (Kailash Mandir Road) ಬಳಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ಕೂಟಿಯಲ್ಲಿ ತನ್ನ ಪತ್ನಿ ಹೋಗುತ್ತಿರುವುದನ್ನು ನೋಡಿ, ಗಾಡಿಯನ್ನು ಫಾಲೋವ್ ಮಾಡಿಕೊಂಡು ಹೋಗಿದ್ದಾನೆ. ಇನ್ನೂ ಈ ವೀಡಿಯೋವನ್ನು ವ್ಯಕ್ತಿ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ
Advertisement
Advertisement
ಈ ಪ್ರಕರಣದ ಮಧ್ಯೆ ಪೊಲೀಸರು ಎಂಟ್ರಿ ನೀಡುವುದಕ್ಕೂ ಮುನ್ನವೇ ವ್ಯಕ್ತಿ ಪತ್ನಿಯ ಪ್ರಿಯಕರನಿಗೆ(Lover) ಅಡ್ಡಹಾಕಿ ಕಪಾಳಮೋಕ್ಷ(Slapped) ಮಾಡಿದ್ದಾನೆ. ಇದೀಗ ಸಾರ್ವಜನಿಕ ಶಾಂತಿ (Public Peace) ಕದಡಿದ ಕಾರಣಕ್ಕಾಗಿ ಇಬ್ಬರಿಗೂ ದಂಡ ವಿಧಿಸಲಾಗಿದೆ. ಆದರೆ ಮಹಿಳೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ