ಬೆಂಗಳೂರು: ನಮಗೆ ಇಷ್ಟವಾದವರಿಗೆ ಅವರಿಗೆ ಇಷ್ಟವಾದುದನ್ನು ಉಡುಗೊರೆಯಾಗಿ ನೀಡುವುದು ಒಂದು ಖುಷಿಯ ಸಂಗತಿ. ಅದರಂತೆ ಸಿಲಿಕಾನ್ ಸಿಟಿಯ ಉದ್ಯಮಿಯೊಬ್ಬರು ತಮ್ಮ ಪತ್ನಿಗೆ 4.8 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಲಾ ಫೆಮ್ಮೆ ಎಂಬ ಕಂಪನಿಯ ಸಿಇಓ ನಿಲುಫರ್ ಶೆರಿಫ್ ಎಂಬವರು ಹೆಂಡತಿಗೆ ಇಷ್ಟವಾದ ಲ್ಯಾಂಬೋರ್ಗಿನಿ ಹರಾಕೆನ್ ಎಲ್‍ಪಿ 610-4 ಎಂಬ ಹಳದಿ ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದು. ಈ ವಿಡಿಯೋವನ್ನು ಆಟೊಮೊಬಿಲಿ ಅರ್ಡೆಂಟ್ ಎಂಬ ಕಂಪನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದೆ.
https://www.instagram.com/p/Byz77QqHHHF/?utm_source=ig_embed
ಈ ಲ್ಯಾಂಬೋರ್ಗಿನಿ ಹರಾಕೆನ್ ಎಲ್‍ಪಿ 610-4 ಎಂಬ ಕಾರಿನ ಬೆಲೆ 4.80 ಕೋಟಿ ರೂ. ಆಗಿದ್ದು ಇದರ ಆರಂಭಿಕ ಮೌಲ್ಯವೇ 3 ಕೋಟಿ ಇದೆ. ಈ ಕಾರು ಹೆಚ್ಚು ದುಬಾರಿ ಇರುವ ಎಡಬ್ಲ್ಯುಡಿ ಮಾದರಿಯ ರೂಪಾಂತರವಾಗಿದ್ದು, ಗ್ರೌಂಡ್ ಕ್ಲಿಯರೆನ್ಸ್ ಅನ್ನು 45 ಎಂಎಂ ಹೆಚ್ಚಿಸುವಷ್ಟು ಸಾಮಥ್ರ್ಯ ಇರುವ ಸೂಪರ್ ಕಾರ್ ಆಗಿದೆ. ಕೇವಲ 3 ಸೆಕೆಂಡ್‍ಗಳಲ್ಲಿ ತನ್ನ ವೇಗವನ್ನು ಗಂಟೆಗೆ 100 ಕಿ.ಮೀ ಹೆಚ್ಚಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದೆ.
ಈ ಲ್ಯಾಂಬೋರ್ಗಿನಿ ಹರಾಕೆನ್ ಇಟಾಲಿಯನ್ ಕಾರು ಉತ್ಪಾದಕರಿಂದ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಲ್ಯಾಂಬೋರ್ಗಿನಿ ಕಂಪನಿಯಿಂದ ಇತ್ತೀಚೆಗೆ ಉರುಸ್ ಎಂಬ ಎಸ್‍ಯುವಿಯನ್ನು ಬಿಡುಗಡೆ ಮಾಡಿದ್ದು ಇದು ವಿಶ್ವದಾದ್ಯಂತ ಹೆಚ್ಚು ಜನಪ್ರಿಯವಾಗಿದೆ.
ಈ ರೀತಿಯ ಕಾರುಗಳನ್ನು ಉಡುಗೊರೆಯಾಗಿ ಕೊಡುವುದು ಭಾರತದಲ್ಲಿ ಅಪರೂಪ. ಇದಕ್ಕೂ ಮುಂಚೆ ಯುಎಇ ಮೂಲದ ಎನ್‍ಆರ್‍ಐ ಸೋಹನ್ ರಾಯ್ ಎಂಬುವವರು ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಪತ್ನಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಮೂಲಕ ಅವರ ಪತ್ನಿ ರೋಲ್ಸ್ ರಾಯ್ಸ್ ಕಾರನ್ನು ಹೊಂದಿದ ವಿಶ್ವದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]