ಬಿಹಾರ: ವರದಕ್ಷಿಣೆ ಹಣ ಮತ್ತು ಸ್ಕಾರ್ಪಿಯೋ ಕಾರಿಗಾಗಿ ಆಕೆಯ ಗಂಡ ಮತ್ತು ಅತ್ತೆ ಸೇರಿ ಮಹಿಳೆಯನ್ನು ಜೀವಂತ ಸುಟ್ಟು ಹಾಕಿರುವ ಘಟನೆಯು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾರತ್ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ಕೋಮಲ್ ಕುಮಾರಿ ಎಂದು ಗುರುತಿಸಲಾಗಿದೆ. ವರದಕ್ಷಿಣೆಯಾಗಿ ಹಣ, ಸ್ಕಾರ್ಪಿಯೋ ಕಾರಿಗಾಗಿ ಮಹಿಳೆಯನ್ನು ಸುಟ್ಟು ಕೊಂದಿದ್ದಾರೆ.ಕೊಲೆ ಮಾಡಲಾಗಿದೆ ಎಂದು ಮೃತಳ ಸಹೋದರ ಮಹಿಳೆಯ ಪತಿ ಮತ್ತು ಅತ್ತೆಯ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸಿಂಧೂರ ರಾಜಕಾರಣ – ಸಂಸ್ಕೃತಿ ತಂಟೆಗೆ ಬರ್ಬೇಡಿ ಎಂದು ಸರ್ಕಾರದ ಎಚ್ಚರಿಕೆ
Advertisement
Advertisement
ಅಡುಗೆ ಮಾಡುವಾಗ ಪ್ರೆಶರ್ ಕುಕ್ಕರ್ ಸ್ಫೋಟಗೊಂಡು ಕೋಮಲ್ ಸುಟ್ಟು ಕರಕಲಾಗಿರುವುದಾಗಿ ಅತ್ತೆಯ ಮನೆಯವರು ಮಹಿಳೆಯ ತಾಯಿಯ ಮನೆಗೆ ಸುದ್ದಿ ಮುಟ್ಟಿಸಿದ್ದರು. ಮಹಿಳೆಯ ತವರಿನ ಮನೆಯವರು ತರಾತುರಿಯಲ್ಲಿ ಪಾವಾಪುರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾಳೆ. ವರದಕ್ಷಿಣೆಗಾಗಿ ತನ್ನ ಸಹೋದರಿಯನ್ನು ಜೀವಂತ ಸುಟ್ಟು ಹಾಕಲಾಗಿದೆ ಎಂದು ಮೃತನ ಸಹೋದರ ಆರೋಪಿಸಿದ್ದಾನೆ. ಆರೋಪಿ ಅಳಿಯನ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ. ಮೃತ ಮಹಿಳೆಯ ಶವದ ಮರಣೋತ್ತರ ಪರೀಕ್ಷೆಯನ್ನು ಪಾವಾಪುರಿ ವಿಮ್ಸ್‌ನಲ್ಲಿ ನಡೆಸಲಾಗುತ್ತಿದೆ.