– ಪಾತ್ರೆಯಲ್ಲಿ ರುಂಡ ಇಟ್ಟುಕೊಂಡು ಪೊಲೀಸರಿಗೆ ಶರಣಾದ
– ಹತ್ಯೆಗೈದು ಮನೆ ಬಿಟ್ಟು ಪರಾರಿಯಾಗಿದ್ದ ಪತಿ
ಲಕ್ನೋ: ಮದ್ಯ ಕುಡಿಯುವಾಗ ತಡೆದಿದ್ದಕ್ಕೆ ಪತಿಯೊಬ್ಬ ಪತ್ನಿಯ ರುಂಡವನ್ನೇ ಕತ್ತರಿಸಿ ಕೊಲೆ ಗೈದು, ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಆರೋಪಿ ಪತ್ನಿಯ ರುಂಡವನ್ನು ಹಿಡಿದು ತಂದು ಪೊಲೀಸರಿಗೆ ಶರಣಾಗಿದ್ದಾನೆ. ಆಗ್ರಾದ ಕಚ್ಪುರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಚ್ಪುರ ನಿವಾಸಿ ನರೇಶ್(30) ಪತ್ನಿ ಶಾಂತಿ(30) ರುಂಡ ಕತ್ತರಿಸಿ ಕೊಲೆ ಮಾಡಿದ್ದಾನೆ. ಮೆಕ್ಯಾನಿಕ್ ಆಗಿರುವ ನರೇಶ್ ಸದಾ ಪತ್ನಿ ಬಳಿ ಒಂದಲ್ಲಾ ಒಂದು ಕಾರಣಕ್ಕೆ ಜಗಳವಾಡುತ್ತಲೇ ಇರುತ್ತಿದ್ದನು. ದಶಕಗಳ ಹಿಂದೆ ಮದುವೆಯಾದ ದಂಪತಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನಿದ್ದಾನೆ. ಇದನ್ನೂ ಓದಿ:ಹೃತಿಕ್ ರೋಶನ್ ಮೇಲೆ ಕ್ರಶ್ – ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ
Advertisement
Advertisement
ಆದರೆ ಭಾನುವಾರ ರಾತ್ರಿ ಮಕ್ಕಳು ಮಲಗಿದ್ದ ವೇಳೆ ನರೇಶ್ ಮದ್ಯ ಕುಡಿಯುತ್ತಿದ್ದನು. ಆಗ ಶಾಂತಿ ಆತನನ್ನು ಕುಡಿಯಬೇಡಿ ಎಂದು ತಡೆದಿದ್ದಳು. ಮೊದಲೇ ಕುಡಿದ ನಶೆಯಲ್ಲಿದ್ದ ನರೇಶ್ ಪತ್ನಿ ಮಾತಿಗೆ ಕೋಪಗೊಂಡು, ಆಕೆಯನ್ನು ಎಳೆದುಕೊಂಡು ಕೋಣೆಗೆ ಹೋಗಿದ್ದಾನೆ. ಅಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿದ, ನಂತರ ಹರಿತವಾದ ವಸ್ತುವಿನಿಂದ ಆಕೆ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ರುಂಡವನ್ನು ಪಾತ್ರೆಯೊಂದರಲ್ಲಿ ಇಟ್ಟುಕೊಂಡು ಕೋಣೆಗೆ ಬೀಗ ಹಾಕಿ ಮನೆಬಿಟ್ಟು ಪರಾರಿಯಾಗಿದ್ದ.
Advertisement
Advertisement
ಮರುದಿನ ಬೆಳಗ್ಗೆ ಮಕ್ಕಳು ಎದ್ದು ತಾಯಿ ಕಾಣಲಿಲ್ಲ ಎಂದು ಹುಡುಕಲು ಆರಂಭಿಸಿದರು. ಈ ವೇಳೆ ಬೀಗ ಒಡೆದು ಕೋಣೆಯನ್ನು ತೆರೆದಾಗ ರಕ್ತದ ಮಡುವಿನ ಮಧ್ಯೆ ತಲೆ ಇಲ್ಲದ ಸ್ಥಿತಿಯಲ್ಲಿ ಹೆಣವಾಗಿ ಅಮ್ಮ ಬಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮನೆಗೆ ಬಂದ ಸಂಬಂಧಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಇದನ್ನೂ ಓದಿ:ಕಾಮದಾಸೆಯಿಂದ ಸೊಸೆಯನ್ನೇ ಚುಚ್ಚಿ ಕೊಂದ ಮಾವ
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಆರೋಪಿ ಕೊಲೆ ಮಾಡಿದ ಬಳಿಕ ನೆಲದ ಮೇಲೆ ಬಿದ್ದ ರಕ್ತದ ಕಲೆಗಳನ್ನು ಒರೆಸಲು ಯತ್ನಿಸಿದ್ದನು ಎಂಬುದು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ನರೇಶ್ ಪತ್ನಿಯ ರುಂಡ ಹಿಡಿದು ತಂದು ಠಾಣೆಗೆ ಶರಣಾಗಿದ್ದಾನೆ. ತಕ್ಷಣ ಆತನ್ನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.