ವಿಜಯಪುರ: ಕುಡಿಯಲು ಹಣ ನೀಡದ ಕಾರಣ ಪತಿಯೊಬ್ಬ ತನ್ನ ಪತ್ನಿ ಹಾಗೂ ಮಗಳನ್ನು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ರಾಜೇಸಾಬ್ ಲಿಂಗಸೂರ(38) ಹಲ್ಲೆ ಮಾಡಿದ ಪಾಪಿ ಪತಿ. ಪತ್ನಿ ಶಮೀಮಾ ಬಾನು(29) ಹಾಗೂ ಮಗಳು ಅಮೀನಾ(6) ಗೆ ಗಂಭೀರ ಗಾಯಗಳಾಗಿದ್ದು, ಶಮೀಮಾಬಾನು ಬಲಗೈ ಹಾಗೂ ಕಿವಿ ಕಟ್ ಆಗಿದೆ. ಇನ್ನೂ ಮಗಳು ಅಮೀನಾಳ ಬಲಗೈ ಬೆರಳುಗಳು ತುಂಡಾಗಿದೆ.
ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಳಿಕ ಪಾಪಿ ಪತಿ ರಾಜೇಸಾಬ್ ಲಿಂಗಸೂರ ಪರಾರಿಯಾಗಿದ್ದಾನೆ.
ಈ ಬಗ್ಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.