ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಪತಿ ಮಹಾಶಯ ಪತ್ನಿಯನ್ನ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಿಣಕನಗುರ್ಕಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಂದ್ರಪ್ಪ ಎಂಬಾತ ತನ್ನ ಪತ್ನಿ ಜಯಂತಿ ಮೇಲೆ ಮನಸ್ಸೋ ಇಚ್ಛೆ ಕುಡುಗೋಲಿನಿಂದ ಕೊಚ್ಚಿದ್ದಾನೆ. ಪರಿಣಾಮ ಪತ್ನಿ ಜಯಂತಿ ಕೈ ಸೇರಿದಂತೆ ಭುಜದ ಭಾಗದಲ್ಲಿ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳು ಜಯಂತಿಯನ್ನ ಪಕ್ಕದ ಮನೆಯ ವಯೋವೃದ್ಧರು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಾತನಾಡಲು ಆಗದ ಪರಿಸ್ಥಿತಿಯಲ್ಲಿರುವ ಜಯಂತಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ಬಗ್ಗೆ ವಿಷಯ ತಿಳಿದ ಮಂಚೇನಹಳ್ಳಿ ಪೊಲೀಸರು ಆರೋಪಿ ಪತಿ ಚಂದ್ರಪ್ಪನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸಣ್ಣ ಪುಟ್ಟ ವಿಷಯಕ್ಕೆ ನಮ್ಮಿಬ್ಬರ ಮಧ್ಯೆ ಪದೇ ಪದೇ ಮನಸ್ತಾಪ ಬರುತ್ತಿದ್ದು, ಇಂದು ಸಹ ಅದೇ ರೀತಿ ಗಲಾಟೆಯಾಗಿ ಈ ಕೃತ್ಯ ನಡೆಸಿದೆ ಅಂತ ಚಂದ್ರಪ್ಪ ಪೊಲೀಸರ ಬಳಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv