ಮಂಡ್ಯ: ಪತಿಯ ಸಾವನ್ನು ನೋಡಿ ಪತ್ನಿಯೂ ಮೃತಪಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲಹಳ್ಳಿ ನಡೆದಿದೆ.
ಹುಲ್ಲಹಳ್ಳಿ ಗ್ರಾಮದ ಹೊಂಬೇಗೌಡ(70) ಮತ್ತು ಮಂಜಮ್ಮ(60) ಸಾವಿನಲ್ಲೂ ಒಂದಾದ ರೈತ ದಂಪತಿ. ಹೊಂಬೇಗೌಡ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ತಕ್ಷಣ ಹೊಂಬೇಗೌಡ ಅವರನ್ನು ಕಾರಿನಲ್ಲಿ ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಈ ವೇಳೆ ಪತಿಯ ಜೊತೆ ಕಾರಿನಲ್ಲೇ ಇದ್ದ ಪತ್ನಿ ಮಂಜಮ್ಮ ನಿಮಗೇನಾದರೂ ಆದರೆ ನಾನು ಬದುಕಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಆಸ್ಪತ್ರೆಗೆ ಹೋಗುವಾಗ ಬಾಯಾರಿಕೆಯಿಂದ ಹೊಂಬೇಗೌಡ ನೀರನ್ನು ಕುಡಿಸುವಂತೆ ಪತ್ನಿ ಮಂಜಮ್ಮ ಅವರನ್ನು ಕೇಳಿದ್ದಾರೆ. ಪತ್ನಿ ಮಂಜಮ್ಮ ಅವರು ನೀರು ಕುಡಿಸಿದ ನಂತರ ಮಾರ್ಗ ಮಧ್ಯದಲ್ಲೇ ಹೊಂಬೇಗೌಡ ಮೃತಪಟ್ಟಿದ್ದಾರೆ.
ಪತಿ ಸಾವನ್ನಪ್ಪಿದ ಐದೇ ನಿಮಿಷಕ್ಕೆ ಆಘಾತದಿಂದ ಪತ್ನಿ ಮಂಜಮ್ಮ ಕೂಡ ಇಹಲೋಕ ತ್ಯಜಿಸಿದ್ದಾರೆ. ಇದೀಗ ದಂಪತಿ ಸಾವಿನಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews