ಕಲಬುರಗಿ: ಮನೆಯಲ್ಲಿದ್ದ 2 ಸಾವಿರ ಕದ್ದ ಆರೋಪ ಮಾಡಿ ಸೊಸೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ದೇವಲನಾಯಕ ತಾಂಡಾದಲ್ಲಿ ನಡೆದಿದೆ.
ಪೂಜಾ ಎಂಬ ಯುವತಿಯೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಕಳ್ಳತನ ಆರೋಪ ಮಾಡಿ ಗಂಡ ಮತ್ತು ಅತ್ತಿಗೆ ಬೆಂಕಿ ಹಚ್ಚಿದ್ದಾರೆ. ನಂತರ ಗಾಯಗೊಂಡ ಪೂಜಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ತಡರಾತ್ರಿ ಪೂಜಾ ಸಾವನಪ್ಪಿದ್ದಾರೆ.
ಪೂಜಾ ಅವರ ತಾಯಿಯ ದೂರಿನ ಮೇರೆಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಗಂಡ ತಾರಾಸಿಂಗ್ ಮತ್ತು ಆತನ ತಾಯಿ ಗೋಮಲಾಬಾಯಿ ವಿರುದ್ಧ ದೂರು ದಾಖಲಾಗಿದೆ. ಆರೋಪಿ ತಾರಾಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.