ಚಿಕ್ಕಮಗಳೂರು: ಡೈವೋರ್ಸ್ ಕೊಟ್ಟರೆ ಜೀವನಾಂಶ ಕೊಡಬೇಕಾಗುತ್ತದೆ. ಆದರೆ ಹೆಂಡತಿಯೇ ತನಗೆ ಗಂಡ ಬೇಡವೆಂದು ಬಿಟ್ಟು ಹೋದ್ರೆ ಜೀವನಾಂಶ ಕೊಡೋ ದುಡ್ಡು ಉಳಿಯುತ್ತದೆ ಎಂದು ಎಂಜಿನಿಯರ್ ಗಂಡನೊಬ್ಬ ತನ್ನ ಹೆಂಡತಿಗೆ ತಲಾಖ್ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
Advertisement
ಜಿಲ್ಲೆಯ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ನಿವಾಸಿಯಾಗಿರುವ ಖಾಸಿಮ್ ಒಂದು ವರ್ಷದ ಹಿಂದೆ ಸುಮಯ್ಯ ಎಂಬವರನ್ನು ಮದುವೆಯಾಗಿದ್ದ. ಆದರೆ ತನ್ನ ಅತ್ತಿಗೆಯ ಮೇಲಿನ ಆಸೆಗಾಗಿ ಹೆಂಡ್ತಿಗೆ ಡೈವೋರ್ಸ್ ನೀಡುವಂತೆ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ.
Advertisement
ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ
Advertisement
ಬಿಬಿಎಂ ಓದಿರುವ ಸುಮಯ್ಯ ಅವರನ್ನು ಹೆತ್ತವರು ಎಂಜಿನಿಯರ್ ಅಳಿಯ ಎಂದು ಖಾಸಿಮ್ ಜೊತೆ ಮದುವೆ ಮಾಡಿಕೊಟ್ಟಿದ್ರು. ಆದ್ರೀಗ ಖಾಸಿಮ್ ಮಾನಸಿಕ ಹಿಂಸೆ ನೀಡ್ತಿದ್ದಾನೆ. ಅತ್ತಿಗೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಕಿರುಕುಳ ನೀಡ್ತಿದ್ದು, ತಲಾಖ್‍ಗೆ ಪೀಡಿಸ್ತಿದ್ದಾನೆ ಎಂದು ಸುಮಯ್ಯ ಆರೋಪಿಸಿದ್ದಾರೆ.
Advertisement
ಮದುವೆಯಾದ ಬಳಿಕ ಭದ್ರಾವತಿಯಲ್ಲೇ ಇದ್ದ ಸುಮಯ್ಯಗೆ ಖಾಸಿಮ್ ತಾಯಿ ಸಹ ಹಿಂಸೆ ಕೊಡ್ತಿದ್ದರು. ವರದಕ್ಷಿಣ ಕಿರುಕುಳ ನೀಡ್ತಿದ್ದರು ಎಂದು ಆರೋಪಿಸಿದ್ದಾರೆ. 8 ಲಕ್ಷ ಸಾಲ ಮಾಡಿ ಮದುವೆ ಮಾಡಿದ ಸುಮಯ್ಯ ತಂದೆ ಈಗ ಒಂದೇ ವರ್ಷಕ್ಕೆ ಮಗಳ ಸ್ಥಿತಿ ಕಂಡು ಚಿಂತೆಗೀಡಾಗಿದ್ದಾರೆ.