ಕೋಲಾರ: ಪತಿ ಮಹಾಶಯನೊಬ್ಬ ಇಬ್ಬರಿಗೆ ಕೈ ಕೊಟ್ಟು ಮೂರನೇ ಮದುವೆಗೆ ಮುಂದಾಗಿದ್ದು, ಗಂಡ ಬೇಕು ಅಂತ ಇಬ್ಬರು ಹೆಂಡತಿಯರು ಹುಡಕಾಟ ನಡೆಸುತ್ತಿರೋ ಘಟನೆ ಕೋಲಾರದಲ್ಲಿ ನಡೆದಿದೆ.
ಬೆಂಗಳೂರು ಮೂಲದ ದಿವ್ಯಾ ಹಾಗೂ ಚಿತ್ರದುರ್ಗ ಮೂಲದ ಸುಮಾ ಮೋಸ ಹೋದ ಮಹಿಳೆಯರು. ತುಮಕೂರು ಜಿಲ್ಲೆ ಮಧುಗಿರಿ ಮೂಲದ ತಿಮ್ಮರಾಜು ಮೋಸ ಮಾಡಿದ ಪತಿ. 2006ರಲ್ಲಿ ಕೋಲಾರದ ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಸೂಪರ್‍ವೈಸರ್ ಆಗಿದ್ದ ವೇಳೆ ತಿಮ್ಮರಾಜುಗೆ ಸುಮಾ ಜೊತೆ ಮದುವೆಯಾಗಿತ್ತು. ಆದ್ರೆ 2016ರಲ್ಲಿ ದಿವ್ಯಾ ಜೊತೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಆಕೆಯನ್ನೂ ಬಿಟ್ಟಿದ್ದಾನೆ.
Advertisement
Advertisement
ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ತಿಮ್ಮರಾಜು ಕಾರ್ಯ ನಿರ್ವಹಿಸುತ್ತಿದ್ದಾನೆ. ಆದ್ರೆ ಇದೀಗ ಮತ್ತೊಂದು ಮದುವೆಗೆ ಆತ ಮುಂದಾಗಿದ್ದಾನೆ ಎಂದು ಇಬ್ಬರು ಪತ್ನಿಯರು ಆರೋಪ ಮಾಡಿದ್ದಾರೆ. ತಿಮ್ಮರಾಜು ವಿರುದ್ಧ ಇಬ್ಬರು ಪತ್ನಿಯರು ಕಾನೂನು ಹೋರಾಟಕ್ಕೆ ಮುಂದಾಗಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Advertisement
Advertisement
ನನ್ನ ಜೊತೆ 8 ವರ್ಷ ಸಂಸಾರ ಮಾಡಿ, ಹೆರಿಗೆ ಸಂದರ್ಭದಲ್ಲಿ ತವರು ಮನೆಗೆ ಬಿಟ್ಟು ಹೋದ ಗಂಡ ಇನ್ನೂ ಬಂದಿಲ್ಲ ಎಂದು ಮೊದಲನೇ ಪತ್ನಿ ಸುಮಾ ಹೇಳಿದ್ದಾರೆ.
ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದ ತಿಮ್ಮರಾಜು 8 ತಿಂಗಳಿನಿಂದ ನೆಟ್‍ವರ್ಕ್ ಡಿಟೆಕ್ಟೀವ್ ಏಜೆನ್ಸಿಯಲ್ಲಿ ಕೆಲ ಮಾಡುತ್ತಿದ್ದಾರೆ. ಮದುವೆಯಾದ 15 ದಿನಗಳು ಅನ್ಯೋನ್ಯವಾಗಿದ್ದು, ನಂತರದ ದಿನಗಳಲ್ಲಿ ನನ್ನ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದರು. ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿ 4-5 ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ರು. ಬಂದಾಗಲೆಲ್ಲಾ ಮಾನಸಿಕ ದೈಹಿಕ ಹಿಂಸೆ ನೀಡಿ, ತವರು ಮನೆಯಿಂದ ಹಣ ತಂದುಕೊಂಡು ಎಂದು ಕಿರುಕುಳ ನೀಡುತ್ತಿದ್ದರು ಎಂದು ದಿವ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದ್ರೆ ಈ ಬಗ್ಗೆ ತಿಮ್ಮರಾಜುನನ್ನು ಸಂಪರ್ಕಿಸಿದಾಗ ವಿಭಿನ್ನ ಹೇಳಿಕೆ ನೀಡಿದ್ದಾನೆ. ಸುಮಾಳನ್ನು ನಾನು ಮದುವೆಯೇ ಆಗಿಲ್ಲ. ಅವರ ಮನೆಯಲ್ಲಿ ಬಾಡಿಗೆಗೆ ಇದ್ದೆ ಅಷ್ಟೇ. ದಿವ್ಯಾಳನ್ನು ಮದುವೆಯಾಗಿದ್ದು, ಕೆಲ ಮನಸ್ತಾಪದಿಂದ ದೂರವಾಗಿದ್ದೇನೆ ಎಂದು ಹೇಳಿದ್ದಾನೆ.
ತಿಮ್ಮರಾಜು ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡದೇ ಮೂರನೇ ಮದುವೆಗೆ ಮುಂದಾಗಿದ್ದಾನೆ. ನಮಗಾದ ಅನ್ಯಾಯ ಮತ್ತೊಂದು ಮಹಿಳೆಗೆ ಆಗೋದು ಬೇಡ ಎಂಬುದು ದಿವ್ಯಾ ಹಾಗೂ ಸುಮಾ ಅವರ ಅಳಲಾಗಿದೆ. ಈ ಬಗ್ಗೆ ಈಗಾಗಲೇ ತಿಮ್ಮರಾಜು ವಿರುದ್ಧ ದೂರು ದಾಖಲಾಗಿದ್ದು ಈವರೆಗೆ ಆತನ ಬಂಧನವಾಗಿಲ್ಲ.