ಮುಂಬೈ: ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರಿನ ಇಬ್ಬರು ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ಆದರೆ ಮಾಜಿ ಸಚಿವ ಕೆ.ಜೆ.ಜಾರ್ಜ್ ನಂಟಿರುವ ಪ್ರತಿಷ್ಠಿತ ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ ಅವರು ಒಂದು ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಹುರೂನ್ ಸಂಸ್ಥೆಯು ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಮ್ಯಾಕ್ರೋಟೆಕ್ ಡೆವಲಪರ್ಸ್‍ನ ಸಂಸ್ಥಾಪಕ ಮಂಗಲ್ ಪ್ರಭಾತ್ ಲೋಧಾ ದೇಶದ ಅತ್ಯಂತ ಶ್ರೀಮಂತ ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದಾರೆ. ಲೋಧಾ ಅವರು 31,930 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಕಳೆದ ವರ್ಷವೂ ಲೋಧಾ ಅವರು ಅಗ್ರಸ್ಥಾನದಲ್ಲಿದ್ದರು.
Advertisement
Advertisement
ಡಿಎಲ್‍ಎಫ್ ಉಪಾಧ್ಯಕ್ಷ ರಾಜೀವ್ ಸಿಂಗ್ ಅವರು 25,080 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಅವರು ಈ ಬಾರಿ ಒಂದು ಹಂತ ಏರಿಕೆ ಕಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ ಇದ್ದಾರೆ. ವೀರ್ವಾನಿ ಅವರು 24,750 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
Advertisement
ಮುಂಬೈ, ದೆಹಲಿ ಮತ್ತು ಬೆಂಗಳೂರಿನ ಉದ್ಯಮಿಗಳು ಈ ಪಟ್ಟಿಯಲ್ಲಿ ಶೇ. 75ರಷ್ಟು ಸ್ಥಾನ ಪಡೆದಿದ್ದಾರೆ. ಮುಂಬೈನ ಹಿರಾನಂದಾನಿ ಸಂಸ್ಥೆಯ ನಿರಂಜನ್ ಹಿರಾನಂದಾನಿ ಟಾಪ್ 10 ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಅವರು 17,030 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಐದು ಹಾಗೂ ಆರನೇ ಸ್ಥಾನದಲ್ಲಿ ಕೇ ರಹೇಜಾ ಸಂಸ್ಥೆಯ ಚಂದ್ರು ರಹೇಜಾ ಹಾಗೂ ಒಬೆರಾಯ್ ರಿಯಾಲಿಟಿ ಸಂಸ್ಥೆಯ ವಿಕಾಸ್ ಒಬೆರಾಯ್ ಸ್ಥಾನ ಪಡೆದಿದ್ದು, ಕ್ರಮವಾಗಿ 15,480 ಕೋಟಿ ರೂ. ಹಾಗೂ 13,910 ಕೋಟಿ ರೂ. ಹೊಂದಿದ್ದಾರೆ.
Advertisement
ಬೆಂಗಳೂರಿನ ಬಾಗ್ಮನೆ ಡೆವಲಪರ್ಸ್ ಸಂಸ್ಥೆಯ ರಾಜಾ ಬಾಗ್ಮನೆ ಅವರು 9,960 ಆಸ್ತಿ ಹೊಂದಿದ್ದು, 7ನೇ ಸ್ಥಾನದಲ್ಲಿದ್ದಾರೆ. ಹೌಸ್ ಆಫ್ ಹಿರಾನಂದಾನಿ ಸಂಸ್ಥೆಯ ಸುರೇಂದ್ರ ಹಿರಾನಂದಾನಿ 9,720 ಕೋಟಿ ರೂ. (8ನೇ ಸ್ಥಾನ), ರನ್ವಾಲ್ ಡೆವಲಪರ್ಸ್ ಸಂಸ್ಥೆಯ ಸುಭಾಷ್ ರನ್ವಾಲ್ 7,100 ಕೋಟಿ ರೂ. (9ನೇ ಸ್ಥಾನ) ಹಾಗೂ ಪಿರಮಾಲ್ ರಿಯಾಲಿಟಿ ಸಂಸ್ಥೆಯು ಅಜಯ್ ಪಿರಮಾಲ್ 6,560 ಕೋಟಿ ರೂ. (10ನೇ ಸ್ಥಾನ) ಹೊಂದಿದ್ದಾರೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೇಶದ 100 ದೊಡ್ಡ ಉದ್ಯಮಿಗಳ ಒಟ್ಟು ಆಸ್ತಿಯು 2.77 ಲಕ್ಷ ಕೋಟಿ ರೂ. ಆಗಿದೆ. ಈ ವರ್ಷ ಮುಂಬೈ, ದೆಹಲಿ ಮತ್ತು ಬೆಂಗಳೂರಿನ ಮೂರು ನಗರಗಳ ಡೆವಲಪರ್ ರಿಯಲ್ ಎಸ್ಟೇಟ್ ಶ್ರೀಮಂತ ಪಟ್ಟಿಯಲ್ಲಿ ಶೇ. 75 ಪಾಲನ್ನು ಹೊಂದಿದ್ದಾರೆ.
ಮಂಗಲ್ ಪ್ರಭಾತ್ ಲೋಧಾ ಅವರು ಮುಂಬೈ ಘಟಕದ ಬಿಜೆಪಿಯ ಅಧ್ಯಕ್ಷರೂ ಆಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಲೋಧಾ ಅವರ ಆಸ್ತಿಯಲ್ಲಿ ಶೇ. 18 ರಷ್ಟು ಏರಿಕೆಯಾಗಿದೆ. ಅವರ ಆಸ್ತಿಯ ಮೌಲ್ಯವು ಉಳಿದ 99 ಜನರ ಒಟ್ಟು ಆಸ್ತಿ ಮೌಲ್ಯದ ಶೇ.12ಕ್ಕೆ ಸಮಾನವಾಗಿದೆ. ಎರಡನೇ ಸ್ಥಾನದಲ್ಲಿರುವ ರಾಜೀವ್ ಸಿಂಗ್ ಅವರ ಆಸ್ತಿಯ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.42 ರಷ್ಟು ಏರಿಕೆ ಕಂಡಿದೆ.
ಮಹಿಳೆಯರ ಪಟ್ಟಿ:
ಗೋದ್ರೇಜ್ ಪ್ರಾಪರ್ಟೀಸ್‍ನ ಸ್ಮಿತಾ ವಿ ಕೃಷ್ಣ ಮಹಿಳೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸ್ಮಿತಾ ವಿ ಕೃಷ್ಣ ಅವರು 3,560 ಕೋಟಿ ರೂ. ಆಸ್ತಿಯನ್ನು ಹೊಂದಿದ್ದರೆ, ಎರಡನೇ ಸ್ಥಾನದಲ್ಲಿರುವ ಡಿಎಲ್‍ಎಫ್ ಸಂಸ್ಥೆಯ ರೇಣುಕಾ ತಲ್ವಾರ್ 2,590 ಕೋಟಿ ರೂ. ಆಸ್ತಿ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಡಿಎಲ್‍ಎಫ್ ಸಂಸ್ಥೆಯ ಪಿಯಾ ಸಿಂಗ್ 2,370 ಕೋಟಿ ರೂ. (4ನೇ ಸ್ಥಾನ), ಎಮಾರ್ ಎಂಜಿಎಫ್ ಸಂಸ್ಥೆಯ ಶಿಲ್ಪಾ ಗುಪ್ತಾ 730 ಕೋಟಿ ರೂ. (5ನೇ ಸ್ಥಾನ), ಸೂಪರ್ ಟೆಕ್ ಸಂಸ್ಥೆಯ ಸಂಗೀತ ಅರೋರಾ 410 ಕೋಟಿ ರೂ. (6ನೇ ಸ್ಥಾನ), ಗೋಪಾಲನ್ ಎಂಟರ್ ಪ್ರೈಸಸ್‍ನ ಎಂ ವಸಂತ್ ಕುಮಾರಿ 310 ಕೋಟಿ ರೂ. (7ನೇ ಸ್ಥಾನ) ಹಾಗೂ ವಾಟಿಕಾ ಸಂಸ್ಥೆಯ ಕಾಂಚನ್ ಭಲ್ಲಾ 300 ಕೋಟಿ ರೂ. (8ನೇ ಸ್ಥಾನ) ಹೊಂದಿದ್ದಾರೆ.