ಶ್ರೀನಗರ: ನಾಲ್ಕು ವರ್ಷಗಳ ಕಾಲ ಗೃಹ ಬಂಧನದಲ್ಲಿದ್ದ ಹುರಿಯತ್ ಕಾನ್ಫರೆನ್ಸ್ (Hurriyat Conference) ಮುಖ್ಯಸ್ಥ ಮಿರ್ವೈಜ್ ಉಮರ್ ಫಾರೂಕ್ (Mirwaiz Umar Farooq) ಈಗ ಬಿಡುಗಡೆಯಾಗಿದ್ದಾರೆ.
ಜಮ್ಮು (Jammu) ಮತ್ತು ಕಾಶ್ಮೀರಕ್ಕೆ (Kashmir) ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು (Article 370) ಕೇಂದ್ರಸರ್ಕಾರ ರದ್ದುಗೊಳಿಸುವ ಸಮಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಗೃಹ ಬಂಧನದಲ್ಲಿ ಇರಿಸಿತ್ತು.
Advertisement
ಹಿರಿಯ ಪೊಲೀಸ್ ಅಧಿಕಾರಿಗಳು ಗುರುವಾರ ಮಿರ್ವೈಜ್ ಅವರ ನಿವಾಸಕ್ಕೆ ಭೇಟಿ ನೀಡಿ ಬಿಡುಗಡೆ ಮಾಡುತ್ತಿರುವ ವಿಚಾರವನ್ನು ತಿಳಿಸಿದ್ದರು. ಅಷ್ಟೇ ಅಲ್ಲದೇ ಶುಕ್ರವಾರದ ಪ್ರಾರ್ಥನೆಗಾಗಿ ಶ್ರೀನಗರ ಜಾಮಿಯಾ ಮಸೀದಿಗೆ (Jamia Masjid) ಹೋಗಲು ಅವಕಾಶ ನೀಡಿದ್ದರು.
Advertisement
Hurriyat Conference chairman Mirwaiz Umar Farooq was released from house arrest on Friday, four years after he was taken into detention in the wake of the scrapping of Article 370 of the Constitution in August 2019. pic.twitter.com/h9g9O2UMhB
— JAMMU LINKS NEWS (@JAMMULINKS) September 22, 2023
Advertisement
ಗೃಹ ಬಂಧನದಿಂದ ಬಿಡುಗಡೆಯಾದ ಬಳಿಕ ಶುಕ್ರವಾರ ಮಿರ್ವೈಜ್ ಉಮರ್ ಜಾಮಿಯಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಇದನ್ನೂ ಓದಿ: ಸ್ಟಿರಾಯ್ಡ್‌ನಿಂದಾಗಿ ದೇಹದ ಚರ್ಮ ಹಾಳು ಮಾಡಿಕೊಂಡ ಸಮಂತಾ
Advertisement
ವಿವಿಧ ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರಾಗಿರುವ ಮತ್ತು ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷರಾಗಿರುವ ಮಿರ್ವೈಜ್ ಅವರು ತನ್ನ ಬಿಡುಗಡೆ ಕೋರಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ನಾಲ್ಕು ವಾರಗಳಲ್ಲಿ ಉತ್ತರ ನೀಡುವಂತೆ ಸೆ.15 ರಂದು ಸೂಚಿಸಿತ್ತು.
#WATCH | Mirwaiz Umar Farooq on his way to Srinagar's Jamia Masjid to lead Friday prayers there after 4 years of house arrest pic.twitter.com/wvbjnA2yjF
— ANI (@ANI) September 22, 2023
ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ 2019ರ ಆಗಸ್ಟ್ 5 ರಿಂದ ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಅವರ ನಿವಾಸದಲ್ಲೇ ಗೃಹ ಬಂಧನಲ್ಲಿ ಇರಿಸಲಾಗಿತ್ತು.
Web Stories