– ಪ್ರತಿ ವಾರ್ಡ್ ಗೆ ಬಿಜೆಪಿಯಿಂದ 50 ಲಕ್ಷ ಖರ್ಚು-ಕೈ ಶಾಸಕ
– ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು ಎಂದ ಶಾಸಕ ಮಂಜುನಾಥ್
ಮೈಸೂರು: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ ಹೊರ ಬಂದಿದ್ದು, 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 14, ಜೆಡಿಎಸ್ 7, ಬಿಜೆಪಿ 3, ಎಸ್‍ಡಿಪಿಐ 2 ಮತ್ತು ಪಕ್ಷೇತರರು 5 ವಾರ್ಡ್ ಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಇಲ್ಲಿ ಕೇವಲ 22 ವಾರ್ಡ್ ಗಳಲ್ಲಿ ಮಾತ್ರ ಸ್ಪರ್ಧೆ ಮಾಡಿತ್ತು.
ಬಿಜೆಪಿಯಿಂದ ವಾರ್ಡ್ ಗೆ 50 ಲಕ್ಷ ರೂ: ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಬಗ್ಗೆ ಶಾಸಕ ಹೆಚ್.ಪಿ. ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಹಣದಿಂದಲೇ ಹುಣಸೂರು ನಗರಸಭೆ ಚುನಾವಣೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರತಿ ವಾರ್ಡಿಗೆ 50 ಲಕ್ಷ ಹಣ ಖರ್ಚು ಮಾಡಲಾಗಿದೆ. ಇತ್ತೀಚಿಗೆ ನಡೆದ ಹುಣಸೂರು ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಾಗಲೇ ಇದರ ಸೂಚನೆ ಸಿಕ್ಕಿತ್ತು. ಹೀಗಾಗಿಯೇ ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ಬಿಜೆಪಿ ಗೆ ಮೂರು ಸ್ಥಾನ ಬಂದಿದೆ. ಇಲ್ಲವಾದಲ್ಲಿ ಇನ್ನಷ್ಟು ಸ್ಥಾನ ಕಾಂಗ್ರೆಸ್ ಪಾಲಾಗುತ್ತಿತ್ತು ಎಂದು ಹೇಳಿದ್ದಾರೆ.
Advertisement
Advertisement
ಈಗ ಅಧಿಕಾರ ಹಿಡಿಯಲು ಯಾರನ್ನು ಮನವೊಲಿಸಲು ಹೋಗೋಲ್ಲ. ಮನವೊಲಿಕೆ ಮಾಡೋದು ತಮಾಷೆಯ ವಿಚಾರವೂ ಅಲ್ಲ. ಯಾರು ಬೇಷರತ್ ಬೆಂಬಲ ಕೊಡುತ್ತಾರೆ ಅಂತವರನ್ನ ಸೇರಿಸಿಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸುತ್ತೇವೆ. ಈ ನಗರಸಭೆ ನನಗೆ ಯುಗಾದಿ ರೀತಿ ಬೇವು-ಬೆಲ್ಲ ಎರಡು ನೀಡಿದೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.
Advertisement
ಬಿಜೆಪಿಗಿಂತ ಎಸ್‍ಡಿಪಿಐ ಸಾಧನೆ ದೊಡ್ಡದು: ಹುಣಸೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿಯದ್ದು ಸಾಧನೆಯಲ್ಲ. ನಗರಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಎಸ್‍ಡಿಪಿಐ ಪಕ್ಷದ್ದು ದೊಡ್ಡ ಸಾಧನೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ. ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು 7 ಸಾವಿರ ಇದ್ದ ಮತಗಳನ್ನ 50 ಸಾವಿರಕ್ಕೆ ತೆಗೆದುಕೊಂಡು ಹೋಗಿದ್ದೇನೆ ಅಂತಾರೆ. ಆ ಮತಗಳಿಗೆ ಈ ಸ್ಥಾನಗಳಿಗೆ ಸಾಟಿಯೆ? ಆದರೆ ಏನು ಇಲ್ಲದ ಎಸ್‍ಡಿಪಿಐ 2 ಸ್ಥಾನ ಗೆದ್ದಿರುವುದು ಸಾಧನೆ. 3 ಸ್ಥಾನ ಗೆದ್ದ ಬಿಜೆಪಿ ಗಿಂತಾ 2 ಸ್ಥಾನ ಗೆದ್ದ ಎಸ್‍ಡಿಪಿಐರದ್ದು ಸಾಧನೆ ದೊಡ್ಡದು ಎಂದ್ರು.
Advertisement
ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಹೋಗಲ್ಲ: ಹುಣಸೂರು ನಗರಸಭೆ ಚುನಾವಣಾ ಫಲಿತಾಂಶದ ಬಗ್ಗೆ ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸಮಾಧಾನಕರ ಸಾಧನೆ ಮಾಡಿದೆ. ಹಿಂದೆ ಜಿಟಿಡಿ ಹಾಗೂ ಚಿಕ್ಕಮಾದು ಅವರಂಥ ಘಟಾನುಘಟಿ ನಾಯಕರಿದ್ದು 9 ಸ್ಥಾನ ಗೆದ್ದಿದ್ದೇವು. ಈಗ ಯಾವ ನಾಯಕರು ಇಲ್ಲದೆ 7 ಸ್ಥಾನ ಗೆದ್ದಿದ್ದೇವೆ. ಉಪಚುನಾವಣೆ ಮತಗಳಿಗೂ ನಗರಸಭೆ ಚುನಾವಣೆಗು ವ್ಯತ್ಯಾಸ ಇದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆ ಕೈ ಜೋಡಿಸಲ್ಲ. ಪಕ್ಷೇತರರ ಸಹಾಯ ಪಡೆದು ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ. ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹುಣಸೂರು ನಗರಸಭೆ ಚುನಾವಣೆ ಫಲಿತಾಂಶದ ಸಂಪೂರ್ಣ ವಿವರ.
1ನೇ ವಾರ್ಡ್-ದೇವರಾಜ್- ಜೆಡಿಎಸ್
2ನೇ ವಾರ್ಡ್- ಆಶಾರಾಣಿ- ಪಕ್ಷೇತರ
3ನೇ ವಾರ್ಡ್- ಅನಿಷಾ- ಕಾಂಗ್ರೆಸ್
4ನೇ ವಾರ್ಡ್- ಭವ್ಯ- ಕಾಂಗ್ರೆಸ್
5ನೇ ವಾರ್ಡ್- ಸ್ವಾಮಿಗೌಡ- ಕಾಂಗ್ರೆಸ್
6ನೇ ವಾರ್ಡ್- ದೇವನಾಯ್ಕ- ಕಾಂಗ್ರೆಸ್
7ನೇ ವಾರ್ಡ್- ಶರವಣ- ಜೆಡಿಎಸ್
8ನೇ ವಾರ್ಡ್- ಸತೀಶ್- ಪಕ್ಷೇತರ
9ನೇ ವಾರ್ಡ್- ಸಮೀನಾ ಪರ್ವೇಜ್- ಕಾಂಗ್ರೆಸ್
10ನೇ ವಾರ್ಡ್- ರಮೇಶ್- ಪಕ್ಷೇತರ
11ನೇ ವಾರ್ಡ್- ಹರೀಶ್ ಕುಮಾರ್- ಬಿಜೆಪಿ
12ನೇ ವಾರ್ಡ್- ವಿವೇಕ್- ಬಿಜೆಪಿ
13ನೇ ವಾರ್ಡ್- ಮಾಲಕ್ ಪಾಷಾ- ಪಕ್ಷೇತರ
14ನೇ ವಾರ್ಡ್- ಸಾಯಿಂತಾಜ್- ಜೆಡಿಎಸ್
15ನೇ ವಾರ್ಡ್- ಸೌರಭ ಸಿದ್ದರಾಜು- ಕಾಂಗ್ರೆಸ್
16ನೇ ವಾರ್ಡ್- ಕೃಷ್ಣರಾಜ ಗುಪ್ತ- ಜೆಡಿಎಸ್
17ನೇ ವಾರ್ಡ್- ಮನು- ಕಾಂಗ್ರೆಸ್
18ನೇ ವಾರ್ಡ್- ಹೆಚ್.ಎನ್.ರಮೇಶ್- ಕಾಂಗ್ರೆಸ್
19ನೇ ವಾರ್ಡ್- ಶ್ರೀನಾಥ್- ಜೆಡಿಎಸ್
20ನೇ ವಾರ್ಡ್- ಫರ್ವಿನ್ ತಾಜ್- ಪಕ್ಷೇತರ
21ನೇ ವಾರ್ಡ್- ರಾಣಿ ಪೆರುಮಾಳ್- ಜೆಡಿಎಸ್
22ನೇ ವಾರ್ಡ್- ಜೆಬಿವುಲ್ಲಾ ಖಾನ್- ಕಾಂಗ್ರೆಸ್
23ನೇ ವಾರ್ಡ್- ರಂಜಿತಾ- ಕಾಂಗ್ರೆಸ್
24ನೇ ವಾರ್ಡ್- ಗೀತಾ- ಕಾಂಗ್ರೆಸ್
25ನೇ ವಾರ್ಡ್- ಮಂಜ- ಕಾಂಗ್ರೆಸ್
26ನೇ ವಾರ್ಡ್- ಗಣೇಶ್ ಕುಮಾರಸ್ವಾಮಿ- ಬಿಜೆಪಿ
27ನೇ ವಾರ್ಡ್- ರಾಧಾ- ಜೆಡಿಎಸ್
28 ನೇ ವಾರ್ಡ್- ಶ್ವೇತಾ ಮಂಜು- ಕಾಂಗ್ರೆಸ್
29ನೇ ವಾರ್ಡ್- ಪ್ರಿಯಾಂಕ ಥಾಮಸ್- ಕಾಂಗ್ರೆಸ್
30ನೇ ವಾರ್ಡ್- ಸಮೀನಾಭಾನು- ಎಸ್‍ಡಿಪಿಐ
31ನೇ ವಾರ್ಡ್- ಸೈಯದ್ ಯೂನಸ್- ಎಸ್‍ಡಿಪಿಐ