Latest
66 ಸಾವಿರ ರೂಪಾಯಿ ಗುಳುಂ ಮಾಡಿತು ಮೇಕೆ!

ಕಾನ್ಪುರ: ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತೆ ಇದೆ. ಆಡುಗಳು ಎಲ್ಲಾ ರೀತಿಯ ಸಸ್ಯಗಳನ್ನು ತಿನ್ನುತ್ತೆ ಅಂತ ಅಷ್ಟೇ ಗೊತ್ತು. ಆದ್ರೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಆಡೊಂದು ನೋಟುಗಳನ್ನು ತಿನ್ನುವ ಮೂಲಕ ಈಗ ದೇಶಾದ್ಯಂತ ಸುದ್ದಿ ಮಾಡಿದೆ.
ಹೌದು. ಸಿಲ್ವಾಪುರ ಎಂಬ ಹಳ್ಳಿಯಲ್ಲಿ ಆಡೊಂದು ತುಂಬಾ ಹಸಿವಿನಿಂದ ಬಳಲುತ್ತಿತ್ತು. ಹೀಗಾಗಿ ಮಾಲೀಕ ಸರ್ವೇಶ್ ಕುಮಾರ್ ಪಾಲ್ ಅವರ ಜೇಬಿನಲ್ಲಿದ್ದ ಬರೋಬ್ಬರಿ 2 ಸಾವಿರ ರೂ. ಮೌಲ್ಯದ 66,000 ರೂ. ಹಣವನ್ನು ತಿಂದಿದೆ.
ಸರ್ವೇಶ್ ಕುಮಾರ್ ಅವರು ಮನೆ ನಿರ್ಮಾಣ ಮಾಡುತ್ತಿದ್ದು, ಇದಕ್ಕಾಗಿ ಇಟ್ಟಿಗೆ ಖರೀದಿಸಲು ಸಿದ್ಧತೆ ನಡೆಸುತ್ತಿದ್ದರು. ಇಟ್ಟಿಗೆ ಖರೀದಿಸಲು ತಮ್ಮ ಪ್ಯಾಂಟ್ ಜೇಬಿನಲ್ಲಿ 66 ಸಾವಿರ ರೂ. ಹಣವನ್ನು ಇಟ್ಟುಕೊಂಡಿದ್ದರು.
ಸರ್ವೇಶ್ ಅವರ ಗಮನಕ್ಕೆ ಈ ವಿಚಾರ ಬರುವ ವೇಳೆ ಆಡು ಬಹಳಷ್ಟು ನೋಟನ್ನು ತಿಂದು ಹಾಕಿತ್ತು. ಆದರೂ ಎರಡು 2 ಸಾವಿರ ರೂ. ನೋಟುಗಳನ್ನು ಉಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ನಾವು ಚೆನ್ನಾಗಿ ಮೇಕೆಯನ್ನು ಸಾಕಿಕೊಂಡು ಬಂದಿದ್ದೇನೆ. ಇದಕ್ಕೆ ಪೇಪರ್ ತಿನ್ನುವ ಚಾಳಿ ಇತ್ತು. ನಾವು ಮನೆಯ ಮಗನಂತೆ ಈ ಆಡನ್ನು ನೋಡಿಕೊಳ್ಳುತ್ತಿದ್ದೇವು ಅಂತಾ ಸರ್ವೇಶ್ ಹೇಳಿಕೊಂಡಿದ್ದಾರೆ.
