ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಅದರ ಅನಗತ್ಯ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಿದರು (Layoff). ಶೇ.50ರಷ್ಟು ಉದ್ಯೋಗಿಗಳು ಕಡಿತವಾದ ಬಳಿಕವೂ ಉಳಿದುಕೊಂಡ ಉದ್ಯೋಗಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಹೇರಿದರು. ಇಷ್ಟು ಮಾತ್ರವಲ್ಲದೇ ಟಫ್ ರೂಲ್ಸ್‌ಗಳಿಗೆ ಒಗ್ಗಿಕೊಂಡು ಹೋಗಿ ಇಲ್ಲವೇ ಕಂಪನಿ ತೊರೆಯಿರಿ ಎಂದು ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಮಾಡಿದ್ದಾರೆ. ಇದೀಗ ಮಸ್ಕ್ ಉದ್ಯೋಗಿಗಳಿಗೆ ಕಂಪನಿ ತೊರೆಯಲು ನೀಡಿದ ಗಡುವಿಗೂ ಮೊದಲೇ ನೂರಾರು ಉದ್ಯೋಗಿಗಳು ತಾವಾಗಿಯೇ ರಾಜೀನಾಮೆ (Resignation) ನೀಡಿದ್ದಾರೆ.
Advertisement
ವರದಿಗಳ ಪ್ರಕಾರ, ಎಲೋನ್ ಮಸ್ಕ್ ಹಾರ್ಡ್ಕೋರ್ ಟ್ವಿಟ್ಟರ್ 2.0 ಎಂದು ವಜಾ ಪ್ರಕ್ರಿಯೆಯನ್ನು ಘೋಷಿಸಿದ್ದಾರೆ. ಇದಾದ ಬಳಿಕ ನೂರಾರು ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಟ್ವಿಟ್ಟರ್‌ನ ಹಲವು ಕಚೇರಿಗಳನ್ನು ಮುಚ್ಚಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲಿ ರಾರಾಜಿಸಿದ ಕಾಂತಾರ ಪೋಸ್ಟರ್
Advertisement
ಟ್ವಿಟ್ಟರ್‌ನ ಎಷ್ಟು ಉದ್ಯೋಗಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ ಎಂಬುದು ಅಸ್ಪಷ್ಟವಾಗಿದೆ. ಆದರೆ ಬಹುತೇಕ ಉದ್ಯೋಗಿಗಳು ಕಂಪನಿ ಮಸ್ಕ್ ಪಾಲಾದ ಬಳಿಕ ಚೇತರಿಸಿಕೊಳ್ಳುವ ಅಂಶ ಕ್ಷೀಣಿಸುತ್ತಿದೆ ಎಂಬ ಕಾರಣಕ್ಕೆ ಉದ್ಯೋಗ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.
Advertisement
Advertisement
ಮಸ್ಕ್ ಟ್ವಿಟ್ಟರ್ ಸ್ವಾಧೀನಪಡಿಸಿಕೊಂಡ ಬಳಿಕ ಮೊದಲ ವಾರದಲ್ಲಿ ಕಂಪನಿಯಿಂದ ಸುಮಾರು 3,700 ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆ ಮಾಡಿದ್ದರು. ಇದೀಗ ಕಂಪನಿಯ 7,500 ಉದ್ಯೋಗಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು ರಾಜೀನಾಮೆ ಹಾಗೂ ವಜಾಗೊಳಿಸಲ್ಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕ ಹೌಸ್ ಸ್ಪೀಕರ್ ಆಗಿ ಐತಿಹಾಸಿಕ ಅವಧಿ ಕೊನೆಗೊಳಿಸಿದ ನ್ಯಾನ್ಸಿ ಪೆಲೋಸಿ