ವಿಜಯಪುರ: ನಗರದ ಜೋರಾಪುರ ಪೇಟ್ ನಲ್ಲಿರುವ ಗೋಂಧಳಿ ಗಲ್ಲಿಯ ದುರ್ಗಾ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ಮುಗ್ದ ಮೊಲಗಳ ಮಾರಣಹೋಮ ನಡೆಯುತ್ತದೆ.
Advertisement
ಯುಗಾದಿ ಹಬ್ಬದ ದಿನದಂದು ದೇವಸ್ಥಾನಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಳೆಯರು ಮತ್ತು ಸಂಬಂಧಿಕರೊಂದಿಗೆ ಬೇವು-ಬೆಲ್ಲ ವಿನಿಮಯ ಮಾಡುವುದು ಹಬ್ಬದ ವಿಶೇಷತೆ. ಆದ್ರೆ ವಿಜಯಪುರದಲ್ಲಿ ಯುಗಾದಿ ಮರುದಿನ ಬೇಟೆಗೆ ಪ್ರಸಿದ್ಧವಾದ ಮುಧೋಳ ನಾಯಿಗಳೊಂದಿಗೆ ದೂರದ ಊರುಗಳಿಂದ ಭಕ್ತರು ಬರುತ್ತಾರೆ. ಸಂಜೆ ವೇಳೆಗೆ ನಾಯಿಗಳೊಂದಿಗೆ ಬೇಟೆಗೆ ತೆರಳುವ ಭಕ್ತರು ನೂರಾರು ಮೊಲ ಮತ್ತು ಕಾಡು ಮಿಕಗಳನ್ನು ಸೆರೆ ಹಿಡಿದು ತರುತ್ತಾರೆ.
Advertisement
Advertisement
ಬೇಟೆಯಾಡಿ ತರುವ ಮೊಲಗಳನ್ನ ದೇವಿಯ ಹೆಸರಲ್ಲಿ ಬಲಿ ಕೊಡುತ್ತಾರೆ. ಈ ಪ್ರಾಣಿಗಳ ಮಾರಣಹೋಮ ಮಾಡಿದ ನಂತರ ದೇವಸ್ಥಾನದ ಆವರಣದಲ್ಲಿ ಅಡುಗೆ ತಯಾರಿಸಿ ತಿನ್ನುತ್ತಾರೆ. ಈ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಪೊಲೀಸರು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಈ ದೇವಸ್ಥಾನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಹೆಡ್ ಕ್ವಾಟರ್ಸ್‍ಗೆ ಕೂಗಳತೆಯ ದೂರದಲ್ಲಿದೆ.
Advertisement