ನವದೆಹಲಿ: ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪೊಲೀಸರು (Delhi Police) ಆಫ್ರಿಕಾ (Africa) ಮೂಲದ ಮೂವರನ್ನು ವಶಕ್ಕೆ ಪಡೆದಿದ್ದರು. ಆದರೆ ಅವರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಬರಲು ಸುಮಾರು 100 ಜನ ನೈಜೀರಿಯನ್ನರು (Nigerians) ತೆರಳಿ ಠಾಣೆಯಲ್ಲಿ ದಾಂಧಲೆ ಮಾಡಿರುವ ಘಟನೆ ರಾಜು ಪಾರ್ಕ್ ಪ್ರದೇಶದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಶನಿವಾರ ದಕ್ಷಿಣ ದೆಹಲಿಯ ಪೊಲೀಸರು ವೀಸಾ ಅವಧಿ ಮುಗಿದ ಮೂವರು ನೈಜೀರಿಯನ್ ಪ್ರಜೆಗಳನ್ನು ಬಂಧಿಸಿದ್ದರು. ವಿಷಯ ತಿಳಿದ ತಕ್ಷಣ ಆಫ್ರಿಕಾ ಮೂಲದ ಸುಮಾರು 100 ಜನರ ಗುಂಪು ಒಟ್ಟಾಗಿ, ಪೊಲೀಸ್ ಠಾಣೆಗೆ ನುಗ್ಗಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ ಹಾಗೂ ಮೂವರನ್ನು ಪೊಲೀಸ್ ವಶದಿಂದ ಮುಕ್ತಗೊಳಿಸಿದ್ದಾರೆ. ಇದನ್ನೂ ಓದಿ: ತನ್ನ ಮೇಲೆ ಅತ್ಯಾಚಾರಗೈದ ಆರೋಪಿಯ ತಾಯಿಯ ಮೇಲೆ ಶೂಟೌಟ್, ಅಪ್ರಾಪ್ತೆ ಅರೆಸ್ಟ್
Advertisement
Advertisement
ಘಟನೆಯ ಬಳಿಕ ಆರೋಪಿಗಳ ಪೈಕಿ ಪೊಲೀಸರು ಫಿಲಿಪ್ ಎಂಬಾತನನ್ನು ಮತ್ತೆ ಹಿಡಿದಿದ್ದಾರೆ. ನೆಬ್ ಸರಾಯ್ ಪೊಲೀಸ್ ಠಾಣೆ ಹಾಗೂ ನಾರ್ಕೋಟಿಕ್ ಸೆಲ್ ತಂಡ ಆ ಪ್ರದೇಶದ ಇನ್ನೂ ನಾಲ್ವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ
Advertisement
ಬಂಧನದ ಪ್ರತಿಕಾರವಾಗಿ ಆಫ್ರಿಕಾ ಮೂಲದ ಸುಮಾರು 200 ಜನರು ಮತ್ತೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಪೊಲೀಸರು ಉಲ್ಬಣಗೊಂಡ ಸ್ಥಿತಿಯನ್ನು ನಿಯಂತ್ರಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k