ಗದಗ: ನಗರದಲ್ಲಿ ನಾನ್‍ವೆಜ್ ಪ್ರಿಯರು ಮಾರ್ಕೆಟ್ ಓಪನ್ ಆಗುತ್ತಿದ್ದಂತೆ ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿಸಿದ್ದಾರೆ.
ಇಂದು ಭಾನುವಾರದ ಬಾಡೂಟಕ್ಕಾಗಿ 3 ಗಂಟೆ ಮಾತ್ರ ಮಾಂಸ ಮಾರಾಟ ಮಾಡಲು ಜಿಲ್ಲಾಡಳಿತ ಅವಕಾಶ ನೀಡಿದೆ. ಜಿಲ್ಲಾಡಳಿತ ಈ ಆದೇಶದ ಅನ್ವಯ ನಗರದ ನಾನ್‍ವೆಜ್ ಮಾರ್ಕೆಟ್‍ನಲ್ಲಿ ಜನಸ್ತೋಮ ನಿರ್ಮಾಣವಾಗಿತ್ತು.
Advertisement
Advertisement
ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಂಸ ಪ್ರಿಯರನ್ನ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮೂರು ಸರದಿ ಸಾಲಿನಲ್ಲಿ ನಿಲ್ಲಿಸಿ ಮಾಂಸ ಖರೀದಿಗೆ ಅವಕಾಶ ಕಲ್ಪಿಸಿದರು. ಕೆಜಿ ಮಟನ್‍ಗೆ 700 ರೂ.ರಿಂದ 800 ರೂ., ಕೆಜಿ ಚಿಕನ್‍ಗೆ 200 ರೂ.ರಿಂದ 230 ರೂ. ಆಗಿದೆ. ಫಿಶ್ ಕೆಜಿಗೆ 250 ರೂ.ರಿಂದ 300 ರೂಪಾಯಿ. ಹೀಗೆ ಮಾಂಸದ ದರ ಗಗನಕ್ಕೆರಿದೆ.
Advertisement
Advertisement
ಮಾಂಸ ಮಾರಾಟ ಹೆಸರಿನಲ್ಲಿ ಹಗಲು ದರೋಡೆ ನಿಲ್ಲಬೇಕು. ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಅಂತರ ಕಾಯ್ದುಕೊಳ್ಳಬೇಕು. ಮಟನ್, ಚಿಕನ್, ಫಿಶ್ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಹಣ ಸುಲಿಗೆ ಮಾಡಬಾರದು ಅಂತ ಪೊಲೀಸ್ ಅಧಿಕಾರಿಗಳು ಮಾಂಸ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಪೊಲೀಸರ ಸರ್ಪಗಾವಲಿನಲ್ಲಿ ಜನ ಸರದಿ ಸಾಲಿನಲ್ಲಿ ಮಟನ್, ಚಿಕನ್, ಫಿಶ್ ಖರೀದಿ ಮಾಡಿದರು.