ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ನಂದಿನಿ ಹಾಲಿನ ವಾಹನವೊಂದು ರಸ್ತೆ ಬದಿ ಸೇತುವೆಗೆ ಡಿಕ್ಕಿ ಹೊಡೆದು ಉರುಳಿಬಿದ್ದ ಘಟನೆ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ ಬಳಿ ಇಂದು ಮುಂಜಾನೆ ನಡೆದಿದೆ.
ಉರುಳಿ ಬಿದ್ದ ಪರಿಣಾಮ ನೂರಾರು ನಂದಿನಿ ಹಾಲಿನ ಪ್ಯಾಕೆಟ್ ಹಳ್ಳದಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಅಲ್ಲದೇ ಅದರಲ್ಲಿ ಕೆಲವೊಂದು ಹಾಲಿನ ಪ್ಯಾಕೆಟ್ ಒಡೆದು ಹೋದ ಪರಿಣಾಮ ಹಾಲು ಮಣ್ಣು ಪಾಲಾಗಿದೆ.
ಚೆನ್ನಾಗಿರುವ ಹಾಲಿನ ಪ್ಯಾಕೆಟ್ ಗಳನ್ನು ಬೇರೊಂದು ವಾಹನದಲ್ಲಿ ಬೆಳ್ಳೂರಿಗೆ ಸಾಗಿಸಲಾಗಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಒಂದಷ್ಟು ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.