ತುಮಕೂರು: ನಗರದ ವಿದ್ಯಾನಗರದ ಸಪ್ತಗಿರಿ ನಿವಾಸದಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಲಾಗಿದೆ
ವಿವಿಧ ರೀತಿಯ ಭಂಗಿಗಳಲ್ಲಿರೋ ಗಣೇಶನ ನೋಡುತ್ತಿದ್ದರೆ ನಿಜವಾಗಿಯೂ ವಿಸ್ಮಯವಾಗುತ್ತದೆ. ಶ್ರೀಧರ್ ಎಂಬವರ ಮನೆಯಲ್ಲಿ 1,241 ಗಣೇಶನ ಮೂರ್ತಿಗಳನ್ನ ಕೂರಿಸಿಲಾಗಿದೆ. ಪಲ್ಸರ್ ಮೇಲೆ ತನ್ನ ವಾಹನ ಇಲಿ ಜೊತೆ ಜಾಲಿ ಡ್ರೈವ್ ಮಾಡುತ್ತಿರುವ ಗಣಪತಿ, ಹಾಸಿಗೆ ಮೇಲೆ ಮಲಗಿರೋ ಗಣಪ, ನೃತ್ಯ ಮಾಡುತ್ತಿರುವ ಗಣಪ, ಯೋಗದಲ್ಲಿ ಮಗ್ನನಾಗಿರುವ ಗಣೇಶ, ಮತ್ತೊಂದು ಕಡೆ ಎತ್ತಿನಗಾಡಿ ಮೇಲೆ ಸವಾರಿ ಗಣಪತಿ, ಇದೆಲ್ಲಕ್ಕಿಂತ ಮಿಗಿಲಾಗಿ ಪ್ಲೈಟ್ ಮೇಲೂ ಗಣಪತಿ ಹಾರಾಟ ನಡೆಸುತ್ತಿರುವ ಗಣಪನನ್ನು ಕೂರಿಸಿದ್ದಾರೆ.
Advertisement
Advertisement
ಇಲ್ಲಿ ಇಡೀ ಸಾವಿರ ಗಣಪತಿಗಳಲ್ಲಿ ತುಂಬಾ ವಿಶೇಷವಾಗಿ ಕಾಣೋದು ಅಂದ್ರೆ ಮಹಾತ್ಮ ಗಾಂಧಿಜಿಯವರನ್ನ ಹೋಲಿಕೆ ಮಾಡೋ ಗಣಪ ಹಾಗೂ ಇಡಗುಂಜಿ ಗಣೇಶ ಈ ಎರಡೂ ಗಣಪತಿಗಳು ಇಡೀ ಇವರ ಮನೆಯಲ್ಲಿ ಕೇಂದ್ರ ಬಿಂದು. ಇಷ್ಟೊಂದು ಇಟ್ಟಿರೋದು ಶೋ ಮಾಡೋಕಂತೂ ಅಲ್ಲ. ಇಡೀ ಕುಟುಂಬ ಅಪ್ಪಟ ಗಣೇಶನ ಭಕ್ತರು ಅದಕ್ಕಿಂತ ಮೇಲಾಗಿ ಗಣಪನನ್ನ ಗುರು, ನಂಬಿಕೆ, ಮಾರ್ಗದರ್ಶಕ, ಆತ್ಮ, ಅಂತೆಲ್ಲಾ ತಿಳಿದುಕೊಂಡು ಆರಾಧಿಸಿತ್ತಿರೋ ಕುಟುಂಬವಾಗಿದೆ.
Advertisement
ದೇಶದ ಯಾವುದೇ ಮೂಲೆಗೋದರೂ ಅಲ್ಲಿನ ವಿಶೇಷವಾದ ಗಣಪನ ಮೂರ್ತಿಗಳನ್ನ ತಂದಿಟ್ಟಿದ್ದಾರೆ. ಇವರು ಜಾಸ್ತಿದಿನ ತಮ್ಮ ಮನೆಯಲ್ಲಿ ಈ ಕ್ಯೂಟ್ ಗಣಪಗಳನ್ನ ಇಟ್ಕೊಳ್ಳೋದಿಲ್ಲ ಕೇವಲ ಮೂರೇದಿನ ಇಟ್ಟು ಮತ್ತೆ ಪ್ಯಾಕ್ ಮಾಡಿ ರೂಮ್ ಗೆ ಇಟ್ಟು ಸ್ವಲ್ಪವೂ ಹೆಚ್ಚು ಕಡಿಮೆಯಾಗದಂತೆ ಪ್ರತಿದಿನ ಪೂಜೆ ಮಾಡುತ್ತಾರೆ. ಕಳೆದ ಏಳು ವರ್ಷಗಳಿಂದ ಈ ಹಬ್ಬವನ್ನ ಹೀಗೇ ಆಚರಿಸಿಕೊಂಡು ಬರುತ್ತಿರೋ ಇವರು ಪ್ರತಿ ವರ್ಷ ಗಣೇಶ ಹಬ್ಬದಂದು ನೂರು ಗಣಪತಿಗಳನ್ನ ಹೊಸದಾಗಿ ಕೊಂಡು ಹೀಗೆಲ್ಲಾ ಅಲಂಕಾರ ಮಾಡುತ್ತಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv