ವೆಲ್ಲಿಂಗ್ಟನ್: ದಾಖಲೆಗಳ ಸರದಾರ ಸೂರ್ಯಕುಮಾರ್ ಯಾದವ್ (Suryakumar Yadav) ಇಂದು ಭರ್ಜರಿ ಶತಕ ಸಿಡಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.
SKY Bhau 111* off just 51 Balls.#suryakumaryadav #suryakumar #sky #NZvIND #NZvIND pic.twitter.com/cJL6NATugu
— Top Edge Cricket (@topedge_cricket) November 20, 2022
Advertisement
ಕಿವೀಸ್ ಪ್ರವಾಸ ಕೈಗೊಂಡಿರುವ ಭಾರತ (India) ತಂಡ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲೇ ಅಬ್ಬರಿಸಿರುವ ಸೂರ್ಯ ಕಿವೀಸ್ ಪಡೆಯ ಬೌಲರ್‌ಗಳ ಬೆವರಿಳಿಸಿದ್ದಾರೆ. ಕೇವಲ 49 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಟಿ20ನಲ್ಲಿ ಸೂರ್ಯಕುಮಾರ್ ಸಿಡಿಸಿದ 2ನೇ ಶತಕವಾಗಿದ್ದು, ರೋಹಿತ್ ಶರ್ಮಾ (Rohit Sharma) ನಂತರ ಅತೀ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 2ನೇ ಭಾರತೀಯನೆಂಬ ಖ್ಯಾತಿ ಪಡೆದಿದ್ದಾರೆ. ಇದನ್ನೂ ಓದಿ: ಯೋಧರ ವಿರುದ್ಧ ಮೀಡಿಯಾ ಪಾಟ್ನರ್ಸ್‌ಗೆ ಜಯ – ಮಾಧ್ಯಮ ತಂಡಕ್ಕೆ ಸೌಹಾರ್ದ ಕ್ರಿಕೆಟ್ ಕಪ್
Advertisement
Advertisement
ಇಂದು ನ್ಯೂಜಿಲೆಂಡ್ (Rohit Sharma) ವಿರುದ್ಧ ನಡೆದ ಪಂದ್ಯದಲ್ಲಿ 51 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಅಜೇಯ 111 ರನ್ ಚಚ್ಚಿದ್ದಾರೆ. ಕಿವೀಸ್ ಪಡೆಯ ವಿರುದ್ಧ ಆರಂಭದಿಂದಲೇ ಅಬ್ಬರಿಸಲು ಮುಂದಾದ ಸೂರ್ಯಕುಮಾರ್ ಮೊದಲ 32 ಎಸೆತಗಳಲ್ಲಿ 50 ರನ್ ಸಿಡಿದರೆ, ಮುಂದಿನ 19 ಎಸೆತಗಳಲ್ಲಿ 61 ರನ್ ಚಚ್ಚಿದ್ದಾರೆ. 7 ಸಿಕ್ಸರ್, 11 ಬೌಂಡರಿಗಳು ಇದರಲ್ಲಿ ಸೇರಿವೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ಸ್ಟೇಡಿಯಂಗಳಲ್ಲಿ ಬಿಯರ್ ಬ್ಯಾನ್ – ಫ್ಯಾನ್ಸ್‌ಗೆ ಶಾಕ್ ಕೊಟ್ಟ ಕತಾರ್
Advertisement
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (Cricket) ಇದು ಸೂರ್ಯಕುಮಾರ್ ಯಾದವ್ ಅವರ 2ನೇ ಶತಕವಾಗಿದೆ. 2022ರ ಆವೃತ್ತಿಯ ಜುಲೈನಲ್ಲಿ ಇಂಗ್ಲೆಂಡ್ (England) ವಿರುದ್ಧ ನಡೆದ ಟಿ20 ಸರಣಿಯಲ್ಲಿ 48 ಎಸೆತಗಳಲ್ಲಿ ಸೂರ್ಯಕುಮಾರ್ ಭರ್ಜರಿ ಶತಕ ಬಾರಿಸಿದ್ದರು. ಇದರಲ್ಲಿ 14 ಬೌಂಡರಿ ಮತ್ತು 6 ಸಿಕ್ಸ್‌ಗಳು ದಾಖಲಾಗಿದ್ದವು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2018ರ ಆವೃತ್ತಿಯಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ದಾಖಲೆಗಳ ಸರದಾರ: ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಸರಿಗಟ್ಟಿರುವ ಸೂರ್ಯ ಈಗಾಗಲೇ ಒಂದೇ ವರ್ಷದಲ್ಲಿ ಸಾವಿರ ರನ್‌ಗಳ ಗಡಿ ದಾಟಿದ ಮೊದಲ ಭಾರತೀಯ ಆಟಗಾರ ಹಾಗೂ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.