-3 ಅಮೆರಿಕ ನಾಣ್ಯಗಳು ಸೇರಿದಂತೆ 9 ವಿದೇಶಿ ನಾಣ್ಯಗಳ ಸಂಗ್ರಹ
ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂಜನಾದಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, 9 ವಿದೇಶಿ ನಾಣ್ಯಗಳು ಕಾಣಿಕೆ ರೂಪದಲ್ಲಿ ಸಂಗ್ರಹಗೊಂಡಿವೆ.
Advertisement
ಗಂಗಾವತಿ (Gangavathi) ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಒಟ್ಟು 40 ದಿನಗಳಲ್ಲಿ 26 ಲಕ್ಷದ 60 ಸಾವಿರ ರೂ. ಕಾಣಿಕೆ ಸಂಗ್ರಹವಾಗಿದೆ.ಇದನ್ನೂ ಓದಿ: ಜಾನಪದ ವಿವಿ ಘಟಿಕೋತ್ಸವಕ್ಕೆ ಆಹ್ವಾನಿಸದ್ದಕ್ಕೆ ಶಿಗ್ಗಾಂವಿಯ ನೂತನ ಕೈ ಶಾಸಕ, ಬೆಂಬಲಿಗರಿಂದ ದರ್ಪ
Advertisement
Advertisement
ಜೊತೆಗೆ ವಿದೇಶಿ ನಾಣ್ಯಗಳು ಸಂಗ್ರಹವಾಗಿದ್ದು, 3 ಯುಎಸ್‌ಎ, 1 ಯುಎಇ, 1 ನೇಪಾಳ, 1 ಸೌದಿ ಅರೇಬಿಯಾ, 1 ಹಾಂಕಾಂಗ್, 1 ಸಿಂಗಾಪುರ್, 1 ರಷ್ಯಾ ಸೇರಿ ಒಟ್ಟು 9 ನಾಣ್ಯಗಳು ಕಾಣಿಕೆ ರೂಪದಲ್ಲಿ ಬಂದಿವೆ. ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಮಾಡಲಾಯಿತು.
Advertisement
ಕಳೆದ ವರ್ಷ ಡಿ.14 ರಿಂದ 2024ರ ಜ.05 ರವರೆಗೆ ಹುಂಡಿಯಲ್ಲಿ ಒಟ್ಟು 27,27,761 ರೂ. ಕಾಣಿಕೆ ಸಂಗ್ರಹವಾಗಿತ್ತು. ಆಗ ನೇಪಾಳದ 2 ನೋಟು, 3 ನಾಣ್ಯಗಳು ಸಂಗ್ರಹಗೊಂಡಿದ್ದವು.ಇದನ್ನೂ ಓದಿ: ಮರಕ್ಕೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು – ತಂದೆ, ಮಗ ದಾರುಣ ಸಾವು