ಸಿಡ್ನಿ: ಟೀಂ ಇಂಡಿಯಾ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ನಲ್ಲೂ ಅಬ್ಬರಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ 26 ಎಸೆತದಲ್ಲಿ 56 ರನ್ ಚಚ್ಚಿದ್ದು ಮಾತ್ರವಲ್ಲದೆ 1 ವಿಕೆಟ್ ಪಡೆದು ಸಿಡ್ನಿ ಥಂಡರ್ ತಂಡವನ್ನು ಗೆಲ್ಲಿಸಿದ್ದಾರೆ.
ಒನ್‍ಡೌನ್ ಆಟಗಾರ್ತಿಯಾಗಿ 10.2ನೇ ಓವರ್ ನಲ್ಲಿ ಕ್ರೀಸಿಗೆ ಇಳಿದ ಕೌರ್ 19.3 ಓವರ್ ವರೆಗೂ ಕ್ರೀಸ್‍ನಲ್ಲಿದ್ದರು. ತಂಡ 89 ರನ್ ಗಳಿಸಿದ್ದಾಗ ಬ್ಯಾಟಿಂಗ್ ಗೆ ಇಳಿದ ಕೌರ್ 183 ರನ್ ಗಳಿಸಿ ನಾಲ್ಕನೇಯ ಮತ್ತು ಕೊನೆಯವರಾಗಿ ಔಟಾದರು.
Advertisement
Advertisement
23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೌರ್ ಅಂತಿಮವಾಗಿ 56 ರನ್(26 ಎಸೆತ, 6 ಬೌಂಡರಿ, 3 ಸಿಕ್ಸರ್, 215 ಸ್ಟ್ರೈಕ್ ರೇಟ್) ಸಿಡಿಸಿ ಔಟಾದರು. ತಂಡದ ಪರವಾಗಿ ಪ್ರೀಸ್ಟ್ 49 ರನ್, ಹೇನ್ಸ್ 36 ರನ್, ಬ್ಲಾಕ್‍ವೆಲ್ 33 ರನ್ ಸಿಡಿಸಿದ ಪರಿಣಾಮ 20 ಓವರ್ ಗಳಲ್ಲಿ ಸಿಡ್ನಿ ಥಂಡರ್ ತಂಡ 9 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು.
Advertisement
ಭಾರೀ ಮೊತ್ತವನ್ನು ಬೆನ್ನಟ್ಟಿದ್ದ ಬ್ರಿಸ್ಬೇನ್ ಹೀಟ್ ವುಮೆನ್ 18.5 ಓವರ್ ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಗಿ, ಸಿಡ್ನಿ ತಂಡ 28 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. 3 ಓವರ್ ಎಸೆದು 26 ರನ್ ನೀಡಿ 1 ವಿಕೆಟ್ ಪಡೆದ ಹರ್ಮನ್ ಪ್ರೀತ್ ಕೌರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement
ಟಿ 20 ವಿಶ್ವಕಪ್‍ನ ನ್ಯೂಜಿಲೆಂಡ್ ವಿರುದ್ಧದ ಉದ್ಘಟನಾ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸ್ ಸಿಡಿಸಿ 103 ರನ್ ಚಚ್ಚಿದ್ದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ವೇಗದ ಶತಕ ಸಿಡಿಸಿದ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕೌರ್ ಪಾತ್ರರಾಗಿದ್ದಾರೆ.
Harmanpreet Kaur was all class in her knock of 56 off 26 balls in today's #WBBL04 clash at North Sydney Oval! pic.twitter.com/1SZLWnlAHW
— cricket.com.au (@cricketcomau) December 9, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv