ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ‘ಪುಷ್ಪ’ ಸಿನಿಮಾ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಭಾರತದಲ್ಲಿ ಕೋಟಿ ಕೋಟಿ ಹಣವನ್ನು ಅದು ಬಾಚಿತ್ತು. ಅಲ್ಲು ಅರ್ಜುನ್ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಹಣ ತಂದುಕೊಟ್ಟ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಅದು ಪಾತ್ರವಾಗಿತ್ತು. ಈ ಸಿನಿಮಾದಿಂದ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ಹೆಚ್ಚಿಗೆ ಮಾಡಿಕೊಂಡಿದ್ದರು.
Advertisement
ಈ ಎಲ್ಲ ಗೆಲುವನ್ನು ಮುಂದಿಟ್ಟುಕೊಂಡು ಪುಷ್ಪ ತಂಡವು ಈ ಸಿನಿಮಾವನ್ನು ರಷ್ಯಾಯಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಿತ್ತು. ಆ ದೇಶದ ಭಾಷೆಯಲ್ಲೇ ಡಬ್ ಮಾಡಿ, ರಿಲೀಸ್ ಕೂಡ ಮಾಡಿತ್ತು. ರಷ್ಯಾದಲ್ಲಿ ಈ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಗಲಿದೆ ಎನ್ನುವ ಅಂದಾಜಿನಿಂದ ಇಡೀ ತಂಡವೂ ಅಲ್ಲಿಗೆ ಹೋಗಿ ಪ್ರಚಾರ ಕೂಡ ಮಾಡಿತ್ತು. ಆದರೆ, ರಷ್ಯಾ ಜನರು ಈ ಸಿನಿಮಾವನ್ನು ನಿರೀಕ್ಷಿತ ಮಟ್ಟದಲ್ಲಿ ಸ್ವೀಕರಿಸಿಲ್ಲ. ಅಂದುಕೊಂಡಷ್ಟೂ ಜನರು ಈ ಸಿನಿಮಾವನ್ನು ನೋಡಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಆ ಒಂದು ಮಾತಿನಿಂದ ಮುರಿದು ಬಿತ್ತು ರೂಪೇಶ್ ಶೆಟ್ಟಿ- ರಾಜಣ್ಣ ಫ್ರೆಂಡ್ಶಿಪ್
Advertisement
Advertisement
ಡಬ್ಬಿಂಗ್, ಪ್ರಚಾರಕ್ಕೆ ಮಾಡಿದ ಖರ್ಚು ಕೂಡ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ರಷ್ಯಾದಲ್ಲಿ ಈ ಸಿನಿಮಾ ಭಾರೀ ನಷ್ಟವನ್ನೇ ಅನುಭವಿಸಿದೆ. ಇಡೀ ತಂಡದ ಶ್ರಮ ಮಣ್ಣುಪಾಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾ ಜನರು ಈ ಸಿನಿಮಾವನ್ನು ಯಾಕೆ ಸ್ವೀಕರಿಸಿಲ್ಲ ಎನ್ನುವ ಕುರಿತು ಚಿತ್ರತಂಡ ತಲೆಕೆಡಿಸಿಕೊಂಡು ಕೂತಿದೆ. ಭಾರತದಲ್ಲಿ ಸಿಕ್ಕಿದ್ದ ಮಾನ ರಷ್ಯಾದಲ್ಲಿ ಕಳೆದುಕೊಂಡಂತಾಗಿದೆ ಪುಷ್ಪ ತಂಡ.
Advertisement
ಭಾರತದಲ್ಲಿ ಪುಷ್ಪ ಗೆಲುವಿನ ಬೆನ್ನಲ್ಲೇ ಪುಷ್ಪ 2 ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ. ಕಥೆಗೆ ಮತ್ತಷ್ಟು ಜೀವ ತುಂಬಿ ಈಗಾಗಲೇ ಚಿತ್ರೀಕರಣವನ್ನು ಶುರು ಮಾಡಿದ್ದಾರೆ. ಸದ್ಯಕ್ಕೆ ಅಲ್ಲು ಅರ್ಜುನ್ ಅವರ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರ ಪಾತ್ರವನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡದಿಂದ ಯಾವುದೇ ಮಾಹಿತಿಯು ಹೊರ ಬಂದಿಲ್ಲ.