10ರ ಬಾಲಕನ ನರಬಲಿ – ಕುಟುಂಬದವರೇ ಕತ್ತು ಸೀಳಿ ಕೊಂದ್ರು

Public TV
1 Min Read
BLACK MAGIC 4

ಲಕ್ನೋ: 10 ವರ್ಷದ ಬಾಲಕನನ್ನು (Boy) ಕುಟುಂಬದವರೇ ನರಬಲಿ (Human Sacrifice) ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಬಾಲಕನನ್ನು ನರಬಲಿ ನೀಡಿದ ಆರೋಪದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾರ್ಸಾ ಗ್ರಾಮದ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿದ್ದ. ಬಳಿಕ ಬಾಲಕನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಅದೇ ದಿನ ರಾತ್ರಿ ಬಾಲಕ ಶವವಾಗಿ ಸಿಕ್ಕಿದ್ದ. ಗದ್ದೆಯಲ್ಲಿ ಬಾಲಕನ ಕತ್ತು ಸೀಳಿದ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ARREST

ಪೊಲೀಸರು ತನಿಖೆ ವೇಳೆ ಬಾಲಕನ ಕುಟುಂಬದವರೇ ಆದ ಅನೂಪ್ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಅನೂಪ್‌ಗೆ 2 ವರ್ಷದ ಮಗುವಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದ. ಆತನಿಗೆ ಯಾವುದೇ ಚಿಕಿತ್ಸೆ ಸಕಾರಾತ್ಮಕ ಫಲಿತಾಂಶ ನೀಡದಿದ್ದಾಗ ಅನೂಪ್ ವಾಮಾಚಾರದ ಮೊರೆ ಹೋಗಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

police jeep

ಅನೂಪ್‌ಗೆ ವ್ಯಕ್ತಿಯೊಬ್ಬ ನರಬಲಿ ನೀಡುವಂತೆ ಸಲಹೆ ನೀಡಿದ್ದ. ಅದರಂತೆಯೇ ಅನೂಪ್ ವಿವೇಕ್‌ನ ಚಿಕ್ಕಪ್ಪ ಚಿಂತಾರಾಮ್ ಜೊತೆಗೂಡಿ ಬಾಲಕನನ್ನು ಗುದ್ದಲಿಯಿಂದ ಹೊಡೆದು ಕೊಂದಿದ್ದಾರೆ. ಬಳಿಕ ಆರೋಪಿಗಳಾದ ಅನೂಪ್, ಚಿಂತಾರಾಮ್ ಹಾಗೂ ನರಬಲಿ ನೀಡಲು ಸಲಹೆ ನೀಡಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

Share This Article
Leave a Comment

Leave a Reply

Your email address will not be published. Required fields are marked *