ಬಿಜೆಪಿ ಭದ್ರಕೋಟೆ ಛಿದ್ರ – 20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

Public TV
1 Min Read
Chikkodi 2

ಚಿಕ್ಕೋಡಿ: ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪುರಸಭೆಯಲ್ಲಿ 20 ವರ್ಷಗಳ ಬಳಿಕ ಕಾಂಗ್ರೆಸ್ (Congress) ಅಧಿಪತ್ಯ ಸ್ಥಾಪಿಸಿದೆ.

ಪುರಸಭೆಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ʻಕೈʼಪಡೆ ದಿಗ್ವಿಜಯ ಸಾಧಿಸಿದೆ. ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಇಮ್ರಾನ್ ಮೋಮಿನ್‌ಗೆ ಅಧ್ಯಕ್ಷ ಹುದ್ದೆ ಒಲಿದರೇ ಉಪಾಧ್ಯಕ್ಷರಾಗಿ ಜ್ಯೋತಿ ಬಡಿಗೇರ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಕಮಲ ಸಕ್ಸಸ್ – ಚಾಮರಾಜನಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲು

Chikkodi 1

ತಾಳ್ಮೆ ಮತ್ತು ಎಚ್ಚರಿಕೆ ಹೆಜ್ಜೆ ಇಟ್ಟ ಕಾಂಗ್ರೆಸ್ ಎರಡು ದಶಕಗಳ ಬಳಿಕ ಪುರಸಭೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದೆ. ಸಂಖ್ಯಾಬಲದ ಕೊರತೆಯಿಂದ ಬಿಜೆಪಿ ಸದಸ್ಯರು ಉಮೇದುವಾರಿಕೆ ದಾಖಲಿಸದೇ ಚುನಾವಣೆಯತ್ತ ಸುಳಿಯಲಿಲ್ಲ. ಇದರೊಂದಿಗೆ ಪುರಸಭೆಯ ಆಡಳಿತಕ್ಕೆ ನಡೆದ ಚುನಾವಣೆಯ ಹೈಡ್ರಾಮಾ ಏಕಪಕ್ಷೀಯವಾಗಿ ಕಂಡು ಬಂದಿತು. ಇದನ್ನೂ ಓದಿ: Su-30 MKI ಜೆಟ್‌ ಎಂಜಿನ್‌ ತಯಾರಿಕೆಗೆ ಹೆಚ್‌ಎಎಲ್‌ನೊಂದಿಗೆ ಡೀಲ್‌ – 26,000 ಕೋಟಿ ಒಪ್ಪಂದಕ್ಕೆ ಸಹಿ!

Share This Article