ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ – ಪವಾಡ ಸದೃಶ ರೀತಿಯಲ್ಲಿ ಸವಾರ ಪಾರು

CKB TREE AV 2

ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರವೊಂದು ಬಿದಿದ್ದು, ಬೈಕ್ ಸವಾರ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

CKB TREE AV 3

ತಾಲೂಕಿನ ನಂದಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 7 ರ ಮಾರ್ಗದ ರಸ್ತೆಯಲ್ಲಿ ನಡೆದಿದೆ. ಸುಲ್ತಾನ್ ಪೇಟೆ ಗ್ರಾಮದ ಬೈಕ್ ಸವಾರ ನಾಗರಾಜು ಅದೃಷ್ಟವಶಾತ್ ಘಟನೆಯಲ್ಲಿ ಪಾರಾಗಿದ್ದಾರೆ.

CKB TREE AV 1

ನಾಗರಾಜು ಅವರು ಬೈಕ್‍ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ಸವಾರ ಪಾರಾಗಿದ್ದು, ಟಿವಿಎಸ್ ಎಕ್ಸ್ ಎಲ್ ವಾಹನ ಮರದಡಿ ಸಿಲುಕಿಕೊಂಡಿದೆ.

ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

CKB TREE AV 5

CKB TREE AV 6

Comments

Leave a Reply

Your email address will not be published. Required fields are marked *