ತಿರುವನಂತಪುರಂ/ಮಂಗಳೂರು: ರಸ್ತೆ ಅಗಲೀಕರಣಕ್ಕೆ ಮಸೀದಿ(Mousque) ತೆರವುಗೊಳಿಸುವ ವೇಳೆ ವಿದ್ಯುತ್ ತಂತಿಗೆ ಗೋಪುರ ತಗುಲಿ ಕಂಬಗಳು ಉರುಳಿದ ಘಟನೆ ಕಾಸರಗೋಡಿನ (Kasaragod) ಸುಳ್ಳಿಪ್ಪಾಡಿಯಲ್ಲಿ ನಡೆದಿದೆ.
ಜೆಸಿಬಿಯಿಂದ ಮಸೀದಿಯ ತೆರವು ಗೊಳಿಸುವಾಗ ಹೈಟೆನ್ಷನ್ ತಂತಿಯ ಮೇಲೆ ಮಸೀದಿಯ ಮಿನಾರ್ ಉರುಳಿದೆ. ಮಿನಾರ್ ಉರುಳಿದ ರಭಸಕ್ಕೆ ಹತ್ತಾರು ವಿದ್ಯುತ್ ಕಂಬಗಳು (Electric Pole) ಉರುಳಿಬಿದ್ದಿವೆ. ಹಲವಾರು ವಾಹನಗಳ ನಡುವೆಯೇ ಕಂಬಗಳು ನೆಲಕ್ಕೆ ಉರುಳಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ಟ್ರಾಫಿಕ್ ದಂಡ 50% ರಿಯಾಯ್ತಿ 5 ತಿಂಗಳು ಅವಧಿ ವಿಸ್ತರಣೆ ಮಾಡಿ – ಜೆಡಿಎಸ್ ಸದಸ್ಯ ಮಂಜೇಗೌಡ ಒತ್ತಾಯ
Advertisement
Advertisement
ಘಟನೆ ಬಳಿಕ ಕಾಸರಗೋಡು ಹಾಗೂ ಚೆರ್ಕಳ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಿಂದ ಟ್ರಾಫಿಕ್ ಜಾಮ್ (Traffic Jam) ಉಂಟಾಗಿತ್ತು. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೆ ತೆರವು ಕಾರ್ಯಗಳನ್ನು ನಡೆಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
Advertisement
ಅಗ್ನಿಶಾಮಕ ಹಾಗೂ ಕೆಎಸ್‍ಇಬಿ ಅಧಿಕಾರಿಗಳು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ್ದು ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: 6 ಕೋಟಿ ಮೌಲ್ಯದ ಜಮೀನು ದಾನ ಮಾಡಿದ ಶಾಸಕ ಶರತ್ ಬಚ್ಚೇಗೌಡ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k