ಬೆಂಗಳೂರು: ರಾಜ್ಯ ಸರ್ಕಾರ ಭಾನುವಾರ ಜಾರಿ ಮಾಡಿದ ‘ಶಕ್ತಿ’ ಯೋಜನೆ (Shakti Scheme) ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಾರಿಮಣಿಯರು ದೊಡ್ಡ ಮಟ್ಟದಲ್ಲಿಯೇ ಉಚಿತ ಸಂಚಾರ ಯೋಜನೆಯನ್ನು ಸದುಪಯೋಗ ಮಾಡಿಕೊಳ್ತಿದ್ದಾರೆ.
ಮೆಜೆಸ್ಟಿಕ್, ಯಶವಂತಪುರ, ಶಾಂತಿನಗರ, ಯಲಹಂಕ, ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ವಾರದ ಮೊದಲ ದಿನವಾಗಿದ್ರಿಂದ ಇಂದು ಕೆಲಸಕ್ಕೆ ಹೋಗುವ ಮಹಿಳೆಯರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಸೀಟ್ ಸಿಗದಿದ್ರೂ ಕೆಲವರು ನಿಂತೇ ಪ್ರಯಾಣಿಸಿದ್ರು.
Advertisement
Advertisement
ಜಿಲ್ಲಾ ಕೇಂದ್ರಗಳಲ್ಲೂ ಉಚಿತ ಸಂಚಾರ ಭರಾಟೆ ಜೋರಾಗಿತ್ತು. ಮಹಿಳೆಯರಿಂದ ಮಿಶ್ರ ಪ್ರತಿಕ್ರಿಯೆ ಬಂತು. ಫ್ರೀ ಪ್ರಯಾಣ ಒಳ್ಳೆಯದೇ ಆದರೆ ಮುಂದಿನ ದಿನಗಳಲ್ಲಿ ಇದರ ಎಫೆಕ್ಟ್ ನಮ್ಮ ಮೇಲೆ ಬೀಳಬಾರದು ಅಂತೇಳಿದ್ರು. ಸಹಜವಾಗಿ ಸಾಮಾನ್ಯ ಬಸ್ ಹೊರತುಪಡಿಸಿ ಎಸಿ ಬಸ್, ಐಷಾರಾಮಿ ಬಸ್‍ಗಳಾದ ಪವರ್ ಪ್ಲಸ್, ರಾಜಹಂಸ, ಐರಾವತ ಬಸ್‍ಗಳು ಮತ್ತು ಕೆಲವಡೆ ರೈಲುಗಳು ಖಾಲಿ ಹೊಡಿತಿದ್ವು.
Advertisement
ಆನ್‍ಲೈನ್ ರಿಸರ್ವೇಷನ್ ಇಳಿಮುಖವಾಗಿತ್ತು. ಈ ಮಧ್ಯೆ ಸಚಿವರಾದ ರಾಮಲಿಂಗಾರೆಡ್ಡಿ, ಮಹದೇವಪ್ಪ ಶಕ್ತಿಯೋಜನೆಯನ್ನು ಸಮರ್ಥಿಸಿಕೊಂಡ್ರು. ಅಂದ ಹಾಗೆ, ಮೊದಲ ದಿನವಾದ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ 5 ಲಕ್ಷಕ್ಕೂ ಅಧಿಕ ಮಹಿಳೆಯರು ಉಚಿತ ಸಂಚಾರ ಮಾಡಿದ್ದಾರೆ. ಇದನ್ನೂ ಓದಿ: ಬೆಂ-ಮೈ ದಶಪಥ ಹೆದ್ದಾರಿ ಟೋಲ್ ಮತ್ತಷ್ಟು ದುಬಾರಿ- ಜೂನ್ 1ರಿಂದಲೇ ಪ್ರಯಾಣಿಕರ ಜೇಬಿಗೆ ಕತ್ತರಿ
Advertisement
ದಾಖಲೆ ಬರೆದ ಉಚಿತ ಸಂಚಾರ:
* ಕೆಎಸ್‍ಆರ್ ಟಿಸಿಯಲ್ಲಿ ಮಹಿಳೆಯರ ಪ್ರಯಾಣ -1,93,831, ಪ್ರಯಾಣ ಮೌಲ್ಯ- 58,16,178 (ಕೆಎಸ್‍ಆರ್ ಟಿಸಿಯಲ್ಲಿ ನಿತ್ಯ ಅಂದಾಜು 14.43 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
* ಬಿಎಂಟಿಸಿಯಲ್ಲಿ ಮಹಿಳೆಯರ ಪ್ರಯಾಣ 2,01,215, ಪ್ರಯಾಣ ಮೌಲ್ಯ- 26,19,604 (ಬಿಎಂಟಿಸಿಯಲ್ಲಿ ನಿತ್ಯ ಅಂದಾಜು 10.86 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
* ವಾಯುವ್ಯ ಸಾರಿಗೆಯಲ್ಲಿ ಮಹಿಳೆಯರ ಪ್ರಯಾಣ 1,22,354, ಪ್ರಯಾಣ ಮೌಲ್ಯ- 36,17,096 (ವಾಯುವ್ಯ ಸಾರಿಗೆಯಲ್ಲಿ ನಿತ್ಯ ಅಂದಾಜು 09.12 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
* ಕಲ್ಯಾಣ ಸಾರಿಗೆಯಲ್ಲಿ ಮಹಿಳೆಯರ ಪ್ರಯಾಣ 53,623, ಪ್ರಯಾಣ ಮೌಲ್ಯ 19,70,000 (ಕಲ್ಯಾಣ ಸಾರಿಗೆಯಲ್ಲಿ ನಿತ್ಯ ಅಂದಾಜು 07.41 ಲಕ್ಷ ಮಹಿಳೆಯರು ಸಂಚರಿಸ್ತಾರೆ.)
* 4 ಸಾರಿಗೆ ನಿಗಮದಲ್ಲಿ ಮಹಿಳೆಯರ ಪ್ರಯಾಣ 5,71,023, ಪ್ರಯಾಣ ಮೌಲ್ಯ- 1,40,22,878 (ನಾಲ್ಕು ನಿಗಮಗಳ ಬಸ್‍ಗಳಲ್ಲಿ ನಿತ್ಯ ಅಂದಾಜು 41.81 ಲಕ್ಷ ಮಹಿಳೆಯರು ಸಂಚರಿಸ್ತಾರೆ.)