ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದ (Pakistan Occupied Kashmir) ನಿವಾಸಿಗಳ ಮೇಲೆ ಪಾಕಿಸ್ತಾನ ಸರ್ಕಾರ ಭಾರೀ ತೆರಿಗೆ ವಿಧಿಸಿ ದಬ್ಬಾಳಿಕೆ ನಡೆಸುತ್ತಿದ್ದು, ಇದರ ವಿರುದ್ಧ ಜನ ಬೀದಿಗಿಳಿದು (Protest) ಪ್ರತಿಭಟಿಸಿದ್ದಾರೆ. ಈ ವೇಳೆ ಪಾಕ್‍ನ ಪೊಲೀಸರು ಜನರೆಡೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ್ದು ಇಬ್ಬರು ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ.
ಪಿಒಕೆಯ ನಿವಾಸಿಗಳು ಸರ್ಕಾರದ ವಿರುದ್ಧ ಭಾರೀ ತೆರಿಗೆ, ಹಣದುಬ್ಬರ ಮತ್ತು ವಿದ್ಯುತ್ ಕೊರತೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿತ್ತು. ಈ ವೇಳೆ ಪ್ರತಿಭಟನಾ ನಿರತರ ಮೇಲೆ ಪಾಕಿಸ್ತಾನದ ಸೇನೆ ಮತ್ತು ಸ್ಥಳೀಯ ಪೊಲೀಸರು ಗಾಳಿಯಲ್ಲಿ ಗುಂಡು, ಅಶ್ರುವಾಯು ಮತ್ತು ಪೆಲೆಟ್‍ಗಳನ್ನು ಸಿಡಿಸಿದ್ದಾರೆ. ಇದರಿಂದ ನಾಗರಿಕರು ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ವಾಹನದಲ್ಲಿತ್ತು 7 ಕೋಟಿ ರೂ.!
Advertisement
Advertisement
ಪ್ರತಿಭಟನೆಯ ವೇಳೆ ಪೊಲೀಸರು ಎಕೆ-47 ಬಂದೂಕಿನಿಂದ ಗಾಳಿಯಲ್ಲಿ ಮತ್ತು ಗುಂಪಿನ ಕಡೆಗೆ ಗುಂಡು ಹಾರಿಸಿರುವ ಹಾಗೂ ಆಸ್ಪತ್ರೆಗಳಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಅಳುತ್ತಿರುವ ವೀಡಿಯೋಗಳನ್ನು ಮಾಧ್ಯಮಗಳು ಹಂಚಿಕೊಂಡಿವೆ.
Advertisement
Advertisement
ಪಿಒಕೆ ಪ್ರದೇಶಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್‍ನ್ನು ಪಾಕಿಸ್ತಾನದ ಇತರ ದೊಡ್ಡ ನಗರಗಳಿಗೆ ತಿರುಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಪಾಕ್ ಭಾರೀ ಪ್ರಮಾಣದ ಆರ್ಥಿಕ ಕುಸಿತ ಕಂಡಿದೆ. ಇದರಿಂದ ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‍ನಂತಹ ಜಾಗತಿಕ ಏಜೆನ್ಸಿಗಳಿಂದ ಸಹಾಯಕ್ಕೆ ಎದುರು ನೋಡುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಎದುರು ಪೊಲೀಸ್ ಪೇದೆಗಳಿಂದಲೇ ಪ್ರತಿಭಟನೆ – ಕಾರಣ ಏನು?