ಬೀಜಿಂಗ್: ಚೀನಾದ ನಾನ್ಚಾಂಗ್ ನಗರದ ಐಷಾರಾಮಿ ಹೋಟೆಲೊಂದರಲ್ಲಿ ಅಗ್ನಿ ಅವಘಢ ಸಂಭವಿಸಿದೆ.
ಜಿಯಾಂಕ್ಸಿ ಪ್ರಾಂತ್ಯದ ಹೆಚ್‍ಎನ್‍ಎ ಪ್ಲಾಟಿನಂ ಮಿಕ್ಸ್ ಹೋಟೆಲ್‍ನ ಎರಡನೇ ಮಹಡಿಯಲ್ಲಿ ಇಂದು ಬೆಳಿಗ್ಗೆ ಸುಮಾರು 8 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಸುಮಾರು 14 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಆಂಬುಲೆನ್ಸ್‍ಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಘಟನೆ ನಡೆದ ವೇಳೆ ಸುಮಾರು 10 ಕಾರ್ಮಿಕರು ಎರಡನೇ ಮಹಡಿಯಲ್ಲಿ ಅಲಂಕಾರ ಕೆಲಸ ಮಾಡುತ್ತಿದ್ದರು ಎಂದು ಹೋಟೆಲ್‍ನಿಂದ ರಕ್ಷಣೆ ಮಾಡಲಾದ ಮಹಿಳೆಯೊಬ್ಬರು ಹೇಳಿದ್ದಾರೆ. ಹೋಟೆಲ್‍ನೊಳಗೆ ಹಲವರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
Advertisement
#BREAKING: Fire breaks out at a hotel in Nanchang, Jiangxi Sat morning, several people reported to have been trapped pic.twitter.com/mXukueRL0F
— People's Daily,China (@PDChina) February 25, 2017
Advertisement
#UPDATE: At least 3 people killed, 14 others injured by fire at a hotel in east China's Nanchang Sat; the fire has been put out pic.twitter.com/5RDAXdOReh
— People's Daily,China (@PDChina) February 25, 2017