-ನಿರಂತರ ಮಳೆಗೆ ಹಾವೇರಿ ಜಿಲ್ಲೆಯ ಅನ್ನದಾತರು ಕಂಗಾಲು
ಹಾವೇರಿ: ಜಿಲ್ಲೆಯಲ್ಲಿ ಹಿಂಗಾರು ಮಳೆ ಅನ್ನದಾತರನ್ನು ಅಕ್ಷರಶಃ ಕಂಗಾಲು ಮಾಡಿದೆ. ಹಾವೇರಿ (Haveri) ಜಿಲ್ಲೆಯಲ್ಲಿ ನಿರಂತರ ಮಳೆಗೆ ಯು.ಟಿ.ಪಿ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ದೇವಿಹೊಸೂರು ಗ್ರಾಮದ ಬಳಿ ಯು.ಟಿ.ಪಿ ಕಾಲುವೆ ಒಡೆದು ರೈತರ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.
Advertisement
ಮೆಕ್ಕೆಜೋಳ, ಹತ್ತಿ, ಜೋಳ ಸೇರಿದಂತೆ ಸೋಯಾಬೀನ್ ಬೆಳೆಯು ಹಾನಿಯಾಗಿದ್ದು. ರೈತರು ಕಂಗಾಲಾಗಿದ್ದಾರೆ. ಕಾಲುವೆ ಒಡೆದು ಹೋದರು ಯಾವೊಬ್ಬ ಅಧಿಕಾರಿಗಳು ಬಂದು ನೋಡಿಲ್ಲ. ಕೆಲ ದಿನಗಳ ಹಿಂದಷ್ಟೇ ಹಾವೇರಿ ತಾಲೂಕು ಕನಕಾಪುರ ಬಳಿ ಯು.ಟಿ.ಪಿ ಕಾಲುವೆ ಒಡೆದು ರೈತರ ಜಮೀನುಗಳು ಹಾಳಾಗಿದ್ದವು. ಈಗ ಮತ್ತೆ ದೇವಿ ಹೊಸೂರು ಗ್ರಾಮದ ಬಳಿಯೂ ಒಡೆದ ಯು.ಟಿ.ಪಿ ಕಾಲುವೆಯಿಂದ ಬೆಳೆ ಹಾನಿಯಾಗಿದೆ. ಇದನ್ನೂ ಓದಿ: ತುಮಕೂರು| ಸಾಲಬಾಧೆ ತಾಳಲಾರದೆ ಮಾತ್ರೆ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ – ಪತಿ ಸಾವು, ಪತ್ನಿ ಗಂಭೀರ
Advertisement
Advertisement
ಕಳಪೆ ಕಾಮಗಾರಿ ಮಾಡಿದ್ದೇ ಯು.ಟಿ.ಪಿ ಕಾಲುವೆ ಒಡೆಯಲು ಕಾರಣವಾಗಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿರಸಿಯಲ್ಲಿ ಭಾರೀ ಮಳೆಗೆ ಕೊಚ್ಚಿಹೋದ ಅಡಿಕೆ – 20 ಎಕರೆಗೂ ಹೆಚ್ಚು ಅಡಿಕೆ ತೋಟಕ್ಕೆ ಹಾನಿ
Advertisement