ತುಮಕೂರು: ಅಜ್ಜಿಯ ಆಸ್ತಿ (Grand Mother Property) ಯನ್ನು ಲಪಟಾಯಿಸಲು ಹೊಂಚು ಹಾಕಿದ ಮೊಮ್ಮಗನೋರ್ವ ಸ್ವಂತ ಅಜ್ಜಿಯನ್ನು ಮನೆಯಿಂದ ಹೊರಹಾಕಿದ ಪರಿಣಾಮ ಇದೀಗ ತಾನೇ ಮನೆಯಿಂದ ಹೊರಬಿದ್ದ ಪ್ರಸಂಗವೊಂದು ನಡೆದಿದೆ.
Advertisement
ತುಮಕೂರು ಕೊರಟಗೆರೆ ಪಟ್ಟಣದ 3 ನೇ ವಾರ್ಡ್ ನಲ್ಲಿ ಘಟನೆ ನಡೆದಿದೆ. 80 ವರ್ಷದ ವೃದ್ಧೆ ಕಾವಲಮ್ಮಳನ್ನು ಮೊಮ್ಮಗ ಮಾರುತಿ ಮನೆಯಿಂದ ಹೊರಹಾಕಿದ್ದಾನೆ. ಮಾರುತಿ ಹಾಗೂ ಆತನ ತಾಯಿ ಲಕ್ಷ್ಮಮ್ಮ ಅಜ್ಜಿ ಕಾವಲಮ್ಮ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್‌ರಿಂದ 5ನೇ ಬಾರಿಯ ಬಜೆಟ್ – ಭಾರೀ ನಿರೀಕ್ಷೆಯಲ್ಲಿ ನಾಗರಿಕರು
Advertisement
Advertisement
ಕಳೆದ 8 ತಿಂಗಳ ಹಿಂದೆ ಲಕ್ಷ್ಮಮ್ಮ ಕ್ಯಾನ್ಸರ್ (Cancer) ನಿಂದ ಸಾವನಪ್ಪಿದ್ದಳು. ಲಕ್ಷ್ಮಮ್ಮ ಮೃತಪಟ್ಟ ಬಳಿಕ ಮೊಮ್ಮಗ ಮಾರುತಿ, ಅಜ್ಜಿ ಕಾವಲಮ್ಮಳನ್ನು ಹೊರಹಾಕಿದ್ದಾನೆ. ಕಳೆದ 8 ತಿಂಗಳಿಂದ ವೃದ್ಧೆ ಕಾವಲಮ್ಮ ಪರರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಇತ್ತ ಸಂಬಂಧಿಕರು ಮಾರುತಿ ವಿರುದ್ಧ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಎಸಿ ರಿಶಿ ಆನಂದ್ (Madhugiri AC), ಬಳಿಕ ಪಾಪಿ ಮೊಮ್ಮಗನಿಂದ ವೃದ್ಧೆಗೆ ಮನೆ ಬಿಡಿಸಿಕೊಡುವಂತೆ ಎಸಿ ಆದೇಶ ಹೊರಡಿಸಿದ್ದಾರೆ.
Advertisement
ಎಸಿ ಆದೇಶದಂತೆ ಅಧಿಕಾರಿಗಳು ಮಾರುತಿಯನ್ನ ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇದೀಗ ತಹಶೀಲ್ದಾರ್ ಹಾಗೂ ಪೊಲೀಸರ ಸಮಕ್ಷಮದಲ್ಲಿ ವೃದ್ಧೆ ಕಾವಲಮ್ಮ ತನ್ನ ಮನೆ ಸೇರಿದ್ದಾರೆ. ಇದೀಗ ಎಸಿ ಆದೇಶಕ್ಕೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k