ಮನುಷ್ಯ ಯಾವುದೋ ಸಾಧನೆಯ ಬೆನ್ನು ಬಿದ್ದೋ, ಹಣದ ಹಿಂದೆ ಬಿದ್ದೋ ಚಿಕ್ಕ ಚಿಕ್ಕ ಸಂಗತಿಗಳಲ್ಲಿರುವ ಬಹುದೊಡ್ಡ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾನೆ. ಹಾಗೇ ಈ ʻಹಗ್ʼ ಸಹ ಒಂದು, ನಮ್ಮವರಿಗಾಗಿ ನಮಗಾಗಿ ನಾವು ಕೊಡುವ ಕೆಲವು ಕ್ಷಣಗಳು, ನಮ್ಮ ಬದುಕಿನಲ್ಲಿ ಬಂಗಾರದ ಘಮವನ್ನು ಕೊಡಬಹುದು! ಅದಕ್ಕಾಗಿ ʻಹಗ್ ಡೇʼ ಬಹಳ ಪ್ರಮುಖವಾಗಿ ನನಗೆ ಕಾಣುತ್ತದೆ.ನನ್ನ ಬದುಕಿನಲ್ಲಿ ಯಾರೋ ಇದ್ದಾರೆ ಎಂಬ ಬಹುದೊಡ್ಡ ಖಾತ್ರಿಯನ್ನು ಈ ಅಪ್ಪುಗೆ ಖಂಡಿತ ಬಲಪಡಿಸುತ್ತದೆ ಎಂಬುದು ನನ್ನ ನಂಬಿಕೆ.
`ಹಗ್ ಡೇ ಇತಿಹಾಸ
ಜನರು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸುವ ಸಲುವಾಗಿ ಅಪ್ಪುಗೆಯ ದಿನವನ್ನು (Hug Day 2025) ಮೊದಲು 1986 ರಲ್ಲಿ ಅಮೆರಿಕದಲ್ಲಿ ಆಚರಿಸಲಾಯಿತು. ಕಾಲಾನಂತರದಲ್ಲಿ, ಇದು ಪ್ರಪಂಚದಾದ್ಯಂತ ಆಚರಣೆಗೆ ಬಂತು.
ಹಗ್ ಡೇಯನ್ನು ಏಕೆ ಆಚರಿಸಲಾಗುತ್ತದೆ?
ಫೆಬ್ರವರಿಯಲ್ಲಿ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಈ ದಿನ ಪ್ರೇಮಿಯನ್ನು ಅಪ್ಪಿಕೊಳ್ಳುವುದು ತುಂಬಾ ವಿಶೇಷವಾಗಿದೆ. ನೀವು ಪ್ರೀತಿಸುತ್ತಿದ್ದರೆ ಈ ಸಂದರ್ಭದಲ್ಲಿ ನಿಮ್ಮ ಪ್ರೇಮಿಯನ್ನು ಸಹ ತಬ್ಬಿಕೊಳ್ಳಬಹುದು!
ಅಪ್ಪಿಕೊಳ್ಳುವುದರಿಂದಾಗುವ ಅನೇಕ ಪ್ರಯೋಜನಗಳು
ಆಲಿಂಗನದಿಂದ ಅನೇಕ ಆರೋಗ್ಯಕರ (Health) ಪ್ರಯೋಜನಗಳು ಸಿಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ತಬ್ಬಿಕೊಂಡಾಗ ಪ್ರೀತಿ ಮತ್ತು ವಿಶ್ವಾಸವು ಹೆಚ್ಚಾಗುತ್ತದೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ.
ಅಪ್ಪುಗೆ ವ್ಯಕ್ತಿಯ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆಕ್ಸಿಟೋಸಿನ್ ಹಾರ್ಮೋನ್ ಮಟ್ಟವನ್ನು ಬಹುಪಟ್ಟು ಹೆಚ್ಚಿಸುತ್ತದೆ. ಈ ಹಾರ್ಮೋನ್ ನಮ್ಮ ಶಾಂತತೆ ಮತ್ತು ಸಂತೋಷದ ಭಾವನೆಗಳಿಗೆ ಕಾರಣವಾಗಿದೆ. ಆಕ್ಸಿಟೋಸಿನ್ ಹಾರ್ಮೋನ್‌ನನ್ನು ಸಂತೋಷದ ಹಾರ್ಮೋನ್ ಎಂದೂ ಸಹ ಕರೆಯುತ್ತಾರೆ. ಈ ಆಕ್ಸಿಟೋಸಿನ್ ಹಾರ್ಮೋನ್ ಜನರ ಒತ್ತಡ ಕಡಿಮೆ ಮಾಡುತ್ತದೆ.
ಅಪ್ಪಿಕೊಳ್ಳುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಬಹುಶಃ ನೀವು ಇದನ್ನು ಕೇಳಲು ಸ್ವಲ್ಪ ವಿಚಿತ್ರವೆನಿಸಬಹುದು. ಆದರೂ ಇದು ನಿಜ. ಅಪ್ಪುಗೆಯಿಂದ ಮಹಿಳೆಯರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಅಪ್ಪುಗೆಯು ಅವರ ಮನಸ್ಸಿನಿಂದ ಭಯವನ್ನು ಹೋಗಲಾಡಿಸುತ್ತದೆ ಮತ್ತು ಶಾಂತಿಯನ್ನು ನೀಡುತ್ತದೆ. ಸಣ್ಣ ಅಪ್ಪುಗೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.
ಅಪ್ಪಿಕೊಳ್ಳುವುದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಅಧ್ಯಯನದ ಪ್ರಕಾರ, ಒತ್ತಡಕ್ಕೆ ಸಂಬಂಧಿಸಿದ ಮೆದುಳಿನ ಭಾಗವು ಅಪ್ಪುಗೆಯ ನಂತರ ಹೈಪರ್ ಆ್ಯಕ್ಟಿವ್ ಆಗುತ್ತದೆ. ಇದು ಒತ್ತಡದ ಭಾವನೆಗಳನ್ನು ಸಂತೋಷದ ಭಾವನೆಗಳಾಗಿ ಪರಿವರ್ತಿಸುತ್ತದೆ. 400ಕ್ಕೂ ಹೆಚ್ಚು ಜನರ ಮೇಲೆ ಅಪ್ಪುಗೆಯಿಂದ ಆಗುವ ಪ್ರಯೋಜನಗಳನ್ನು ಸೈಕಲಾಜಿಕಲ್ ಸೈನ್ಸ್ ಜರ್ನಲ್ ಅಧ್ಯಯನ ಮಾಡಿದೆ. ಪ್ರೀತಿ ಪಾತ್ರರನ್ನು ನಿಯಮಿತವಾಗಿ ತಬ್ಬಿಕೊಳ್ಳುವ ಜನರು ರೋಗಗಳಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಅಪ್ಪಿಕೊಳ್ಳುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರೀತಿ ಪಾತ್ರರನ್ನು ತಬ್ಬಿಕೊಂಡ ನಂತರ, ಮೆದುಳು ವೇಗವಾಗಿ ಕೆಲಸ ಮಾಡುತ್ತದೆ, ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಗಾಯಕ್ಕೆ ಔಷಧಿಯಂತೆ, ಮನಸ್ಸಿನ ನೋವುಗಳಿಗೆ ಅಪ್ಪುಗೆ ಮದ್ದಾಗಬಹುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.