ಪುನೀತ್ ರಾಜ್‌ಕುಮಾರ್ ಜೊತೆ ‘ಹುಡುಗರು’ (Hudugaru Film) ಸಿನಿಮಾದಲ್ಲಿ ನಟಿಸಿದ್ದ ಅಭಿನಯ (Abhinaya) ಏ.16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲಿ ನಟಿಸಲು ಹಲವು ಕಥೆಗಳನ್ನು ಕೇಳಿದ್ದೆ, ಯಾವುದು ಇಷ್ಟವಾಗಿಲ್ಲ: ಪೂಜಾ ಹೆಗ್ಡೆ
15 ವರ್ಷಗಳ ಪ್ರೀತಿಗೆ ನಟಿ ಮದುವೆಯ ಮುದ್ರೆ ಒತ್ತಿದ್ದಾರೆ. ಹೈದರಾಬಾದ್‌ನಲ್ಲಿ ಗೆಳೆಯ ವೆಗೆಶನಾ ಕಾರ್ತಿಕ್ (Vegesana Karthik) ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ನವಜೋಡಿ ಹೊಸ ಬಾಳಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ
ಮಾರ್ಚ್ 9ರಂದು ಗೆಳೆಯ ವೆಗೆಶನಾ ಕಾರ್ತಿಕ್ ಜೊತೆ ಅಭಿನಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆದರೆ ಹುಡುಗನ ಹಿನ್ನೆಲೆ ಮತ್ತು ಮದುವೆ ಯಾವಾಗ ಎಂದು ರಿವೀಲ್ ಮಾಡಿರಲಿಲ್ಲ. ಈಗ ನಟಿಯ ಮದುವೆ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.