ಬೆಂಗಳೂರು: ಇಂದು ಫಿಲ್ಮ್ ಚೇಂಬರ್‍ನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಟ ಹುಚ್ಚವೆಂಕಟ್ ಮಾಧ್ಯಮಗಳ ಜೊತೆ ಕ್ಷಮೆ ಕೇಳಿದ್ದಾರೆ.
ಶುಕ್ರವಾರ ಹುಚ್ಚವೆಂಕಟ್ ಅಭಿನಯದ ‘ಪೊರ್ಕಿ ಹುಚ್ಚವೆಂಕಟ್’ ಸಿನಿಮಾ ಬಿಡುಗಡೆಯಾಗಿತ್ತು. ಪತ್ರಿಕೆಯೊಂದು ಸಿನಿಮಾ ವಿಮರ್ಷೆಯನ್ನು ಪ್ರಕಟಿಸಿತ್ತು. ಈ ವಿಮರ್ಷೆಗೆ ಹುಚ್ಚ ವೆಂಕಟ್ ಕಿಡಿಕಾರಿದ್ದರು.
Advertisement
ಈ ವಿಚಾರದ ಬಗ್ಗೆ ಫಿಲ್ಮ್ ಚೇಂಬರ್‍ನಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹುಚ್ಚವೆಂಕಟ್ ಮಾಧ್ಯಮಗಗಳ ಜೊತೆ ವಾಗ್ವಾದಕ್ಕಿಳಿದರು. ಹುಚ್ಚ ವೆಂಕಟ್ ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆದು ಹುಚ್ಚ ವೆಂಕಟ್ ಆವೇಶಭರಿತರಾಗಿ ವಿಮರ್ಶೆ ಮಾಡಲು ನಿವ್ಯಾರು, ವಿಮರ್ಶೆ ಮಾಡಲು ನಿಮಗೆ ಅಧಿಕಾರ ಕೊಟ್ಟವರ್ಯಾರು, ಅದನ್ನು ಜನರು ತಿರ್ಮಾನ ಮಾಡುತ್ತಾರೆ ಎಂದು ಮಾಧ್ಯಮದವರ ಮೇಲೆಯೇ ಸಿಟ್ಟಾದರು.
Advertisement
ಇದನ್ನೂ ಓದಿ: ಪ್ಲೀಸ್ ಒಂದು ದಿನ ಹೌಸ್‍ಫುಲ್ ಮಾಡಿ: ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡ ಹುಚ್ಚ ವೆಂಕಟ್
Advertisement
ರಾಜ್ಯದ ಮುಖ್ಯಮಂತ್ರಿಗಳು 50 ಸಾವಿರ ರೂ. ಖರ್ಚು ಮಾಡಿ ತೆಲಗು ಸಿನಿಮಾ ನೋಡುತ್ತಾರೆ. ಕನ್ನಡ ಚಿತ್ರಗಳನ್ನು ನೋಡಲಿ. ನನ್ನಿಂದ ತಪ್ಪಾಗಿದಲ್ಲಿ ಕ್ಷಮೆ ಇರಲಿ. ನಿಮಗೆ ಬರೆಯೋ ಅಧಿಕಾರ ಇದೆ. ಆದರೆ ವಿಮರ್ಷೆ ಮಾಡೋ ಆಗಿಲ್ಲ. ಸಿನಿಮಾ ಇಷ್ಟ ಇಲ್ಲ ಅಂದ್ರೆ ಸಿನಿಮಾ ನೋಡಲು ಬರಬೇಡಿ ಎಂದು ವೆಂಕಟ್ ಮಾಧ್ಯಮಗಳಿಗೆ ಹೇಳಿದರು.
Advertisement
ಈ ಸಮಸ್ಯೆಗಳನ್ನ ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ವೆಂಕಟ್ ಹತ್ರ ಮಾತಾಡಿ ಕೊನೆ ಮಾಡುವಂತೆ ಹೇಳಿದ್ದೇನೆ. ಅದಕ್ಕೂ ಅವರೂ ಒಪ್ಪಿ ಬಂದಿದ್ದಾರೆ ಎಂದು ಸಾ.ರಾ.ಗೋವಿಂದು ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ