‘ವಿಷ್ಣುಮಾರ್ಗ’ ಚಿತ್ರದಲ್ಲಿ ವಿಷ್ಣು ಅಭಿಮಾನಿ ಆದ ಹುಚ್ಚ ವೆಂಕಟ್

Public TV
1 Min Read
Vishnu Marga 2

ನ್ನಡದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರನ್ನು ನೆನಪಿಸುವಂತಹ ಕಿರುಚಿತ್ರವೊಂದು ರೆಡಿಯಾಗಿದೆ. ಈ (Vishnu Marga) ಕಿರುಚಿತ್ರದಲ್ಲಿ ಹುಚ್ಚ ವೆಂಕಟ್ (Huchcha Venkat) ಕೂಡ ನಟಿಸಿದ್ದು, ವಿಷ್ಣುವರ್ಧನ್ ಅವರ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿಯು ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದೆ.

Vishnu Marga 1

ಹುಚ್ಚ ವೆಂಕಟ್ ಇತ್ತೀಚಿನ ದಿನಗಳಲ್ಲಿ ಯಾರಿಗೂ ಕಾಣದಂತೆ ಮಾಯವಾಗಿದ್ದರು. ಅವರನ್ನು ಹುಡುಕಿ ತಂದು, ಈ ಕಿರುಚಿತ್ರದಲ್ಲಿ ನಟಿಸುವಂತೆ ಮಾಡಿದೆ ಚಿತ್ರತಂಡ. ವಿಜಯ್ ಕಿತ್ತೂರ್ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ವಿಷ್ಣು ಗೋವಿಂದ್ ಸಂಕಲನ ಮಾಡಿದ್ದಾರೆ.

Vishnu Marga 3

ಖ್ಯಾತ ಫೋಟೋಗ್ರಾಫರ್ ಮತ್ತು ಡಿಸೈನರ್ ರಾಜು ವಿಷ್ಣು (Raj Vishnu) ಕೂಡ ಈ ಕಿರುಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು, ಮೊನ್ನೆಯಷ್ಟೇ ಕಿರುಚಿತ್ರದ ಲಿರಿಕಿಲ್ ವಿಡಿಯೋ  ರಿಲೀಸ್ ಆಗಿದೆ. ನಿರ್ದೇಶಕ ಮತ್ತು ನಟರಾದ ರಘುರಾಮ್, ನವೀನ್ ಕೃಷ್ಣ, ನಿರ್ದೇಶಕ ಖದರ್ ಕುಮಾರ್ ಹಾಗೂ ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

ವಿಷ್ಣುವರ್ಧನ್ ಅವರ ಕುರಿತಂತೆ ಹಲವಾರು ವಿಚಾರಗಳನ್ನು ಈ ಕಿರುಚಿತ್ರ ಹೊತ್ತು ತರಲಿದ್ದು, ಈಗಾಗಲೇ ರಿಲೀಸ್ ಆಗಿರುವ ಲಿರಿಕಲ್ ವಿಡಿಯೋ ಸಾಂಗ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅತೀ ಶೀಘ್ರದಲ್ಲೇ ಈ ಕಿರುಚಿತ್ರ ನೋಡುಗರಿಗೆ ಲಭ್ಯವಾಗಲಿದೆ.

Share This Article