ಬೆಂಗಳೂರು: ಕನಿಷ್ಟ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಟ ಹುಚ್ಚ ವೆಂಕಟ್ ಇವರ ಬೆಂಬಲಕ್ಕೆ ನಿಂತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲಿ 2ನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿದ್ದು, ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಹುಚ್ಚ ವೆಂಕಟ್ ಪಬ್ಲಿಕ್ ಟಿವಿಯ ಜೊತೆ ಮಾತನಾಡಿ, ಹೆಣ್ಣುಮಕ್ಕಳ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದು ನಾನು. ಹೆಣ್ಮಕ್ಕಳ ವಿಚಾರ ಬಂದರೆ ಸಾಯುವವರೆಗೂ ಧ್ವನಿ ಎತ್ತುವುದು ನಾನು. ಹಣ್ಮಕ್ಕಳನ್ನು ಈ ರೀತಿ ಬೀದಿಯಲ್ಲಿ ಕೂರಿಸುವುದು ಸರಿಯಲ್ಲ ಎಂದು ಆಕ್ರೋಶದಿಂದ ಹೇಳಿದ್ರು.
Advertisement
Advertisement
ನಾನು ತನ್ವೀರ್ ಸೇಠ್ ಅವರನ್ನ ಕೇಳ್ತೀನಿ, ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಅವರು ಈ ರೀತಿ ಬೀದಿಯಲ್ಲಿ ಕೂತಿದ್ದರೆ ಸುಮ್ಮನಿರುತ್ತೀರಾ? ಈ ಹೆಣ್ಣು ಮಕ್ಕಳು ಏನಾಗಬೇಕು ನಿಮಗೆ? ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿಲ್ವಾ? 2000 ರೂಪಾಯಿಯಲ್ಲಿ ನಾವು-ನೀವು ಬದುಕುವುದಕ್ಕೆ ಆಗುತ್ತಾ? ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಪ್ರಶ್ನಿಸಿದರು.
Advertisement
ತನ್ವೀರ್ ಸೇಠ್ ಈ ವಿಚಾರದಲ್ಲಿ ತಲೆ ಹಾಕಬೇಕು. ಸಿದ್ದರಾಮಯ್ಯ ಅವರು ತೀರ್ಮಾನ ತೆಗೆದುಕೊಳ್ಳಬೇಕು. 2000 ರೂಪಾಯಿಯಲ್ಲಿ ನಾನು, ನೀವು ಹೆಂಡತಿ ಮಕ್ಕಳನ್ನು ಸಾಕುವುದಕ್ಕೆ ಆಗುತ್ತಾ? ಇವರು ತುಂಬಾ ಒಳ್ಳೆಯ ಅಡುಗೆ ಮಾಡುತ್ತಾರೆ. ನೀವು ಸಂಬಂಳ ಕೊಟ್ಟಿಲ್ಲ ಅಂದ್ರೆ ಅವರು ಕೆಟ್ಟ ಅಡುಗೆ ಮಾಡಿದ್ರೆ ಆಗ ನಿಮ್ಮ ಹೆಸರು ಹಾಳಾಗಲ್ವಾ? ಆದ್ರೆ ಅವರಿಗೂ ಮಕ್ಕಳು ಇದ್ದಾರೆ. ಆದ್ದರಿಂದ ಅವರು ಆ ರೀತಿ ಮಾಡುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಯಮ್ಯ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡಿಕೊಂಡರು. ಇದನ್ನು ಓದಿ: 3ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ
Advertisement
ನೀವು ಮನೆಯಲ್ಲಿ ಮಲಗಿದ್ದೀರಾ. ಆದರೆ ನಮ್ಮ ಹೆಣ್ಣು ಮಕ್ಕಳು ಬೀದಿಯಲ್ಲಿ ಮಲಗಿದ್ದಾರೆ. ಒಂದು ಹೆಣ್ಣು ಮಗುವಿಗೆ ರಕ್ಷಣೆ ಎಲ್ಲಿದೆ? ಹೆಣ್ಮಮಕ್ಕಳು ಬೀದಿಯಲ್ಲಿ ಇರಬಾದರು. ನಮ್ಮ ಮನೆಯಲ್ಲೂ ತಾಯಿ, ಹೆಂಡತಿ ಇದ್ದಾರೆ. ಆದ್ದರಿಂದ ಈ ಹೆಣ್ಣುಮಕ್ಕಳು ಬೀದಿಯಲ್ಲಿ ಕೂತಿದ್ದರೆ ಈ ಹುಚ್ಚ ವೆಂಕಟ್ ಬೀದಿಯಲ್ಲಿ ಕೂತುಕೊಳ್ಳುತ್ತಾನೆ. ಹೆಣ್ಣುಮಕ್ಕಳ ವಿಷಯ ಬಂದರೆ ನಾನು ಜೈಲಿಗೂ ಹೋಗಲು ಸಿದ್ಧನಾಗಿದ್ದೇನೆ. ನೀವು ಬರೀ ಸಂಬಳ ಜಾಸ್ತಿ ಮಾಡುವುದು ಅಷ್ಟೆ ಅಲ್ಲ. ಇಲ್ಲಿ ಕೂತಿರುವ ಹೆಣ್ಣು ಮಕ್ಕಳಿಗೆ ಕ್ಷಮೆ ಕೇಳಬೇಕು. ಇಲ್ಲ ಅಂದರೆ ಇಡೀ ಕರ್ನಾಟಕದಲ್ಲಿರುವ ಹೆಣ್ಣುಮಕ್ಕಳು ಬರುತ್ತಾರೆ. ಹೆಣ್ಣುಮಕ್ಕಳ ಶಕ್ತಿ ಗೊತ್ತಾ ನಿಮಗೆ? ನಮ್ಮ ತಾಯಿ ಕೂಡ ಒಂದು ಹೆಣ್ಣು ಮರಿಯಬೇಡಿ ಎಂದು ಹೇಳಿದ್ರು.
https://www.youtube.com/watch?v=EHcPajzmgA4