ಬೆಂಗಳೂರು: ಫಿನಾಯಿಲ್ ಸೇವನೆ ಮತ್ತು ತಮ್ಮ ಪ್ರೀತಿ ವಿಚಾರವಾಗಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆ ವೇಳೆ ಹುಚ್ಚ ವೆಂಕಟ್ ಹೈ ಡ್ರಾಮಾ ಬಯಲಾಗಿದೆ.
ತಾವು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವಿಚಾರವಾಗಿ ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯನ್ನು ಹುಚ್ಚ ವೆಂಕಟ್ ಕರೆದಿದ್ದರು. ಪ್ರಾರಂಭದಲ್ಲಿ ಮೊದಲು ನಾನು ಮಾತಾನಾಡುತ್ತೇನೆ ನಂತರ ನೀವುಗಳು ಪ್ರಶ್ನೆ ಕೇಳಿ ಎಂದು ತಮ್ಮ ಲವ್ ಸ್ಟೋರಿ ಹೇಳತೊಡಗಿದ್ರು. ಸಿನಿಮಾದಲ್ಲಿ ನಾನು ಮತ್ತು ರಚನಾ ಮೊದಲಿಗೆ ನಟಿಸಿದ್ದೇವು. ನಂತರ ಖಾಸಗಿ ಚಾನೆಲ್‍ನ ರಿಯಾಲಿಟಿ ಶೋವೊಂದರಲ್ಲಿ ರಚನಾ ನನಗೆ ಪ್ರಪೋಸ್ ಮಾಡಿದರು. ಮುಂದೆ ಅವರು ನನಗೆ ವೈಯಕ್ತಿಕವಾಗಿ ಹತ್ರ ಆದ್ರು. ರಚನಾ ನನಗೆ ಊಟ ಮಾಡಿಸಿದ್ದಾರೆ. ನಾನು ಬಿಟ್ಟ ಎಂಜಲನ್ನು ಊಟ ಮಾಡಿದ್ದಾರೆ ಎಂದು ತಮ್ಮ ಪ್ರೇಮ ಪುರಾಣವನ್ನು ಹೇಳಿದ್ರು.
Advertisement
Advertisement
ಇನ್ನೂ ವೆಂಕಟ್ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಆಸ್ಪತ್ರೆಯಲ್ಲಿ ನನ್ನ ಫ್ರೆಂಡ್ಸ್ 15 ಸಾವಿರ ರೂ. ನೀಡಿದ್ದಾರೆ. ಬಿಲ್‍ನಲ್ಲಿ ಡಾಕ್ಟರ್‍ಗಳು ನೀಡಿರುವ ಚಿಕಿತ್ಸೆಯ ಪಟ್ಟಿಯಿದೆ. ಕೊನೆಗೆ ಸ್ವಲ್ಪ ಕುಡಿದೆ ಎಂದು ಡ್ರಾಮಾ ಮಾಡಿದರು.
Advertisement
ಈ ವೇಳೆ ಮಾಧ್ಯಮಗಳ ಸರಣಿ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಹುಚ್ಚ ವೆಂಕಟ್, ಕೊನೆಗೆ ನನ್ನಿಂದ ತಪ್ಪಾಗಿದೆ. ನನ್ನ ತಂದೆ ಮೇಲಾಣೆ ಇನ್ನ್ಮುಂದೆ ನನ್ನ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಮಾಧ್ಯಮಗಳ ಮುಂದೆ ಬರೋದಿಲ್ಲ. ರಚನಾ ಅವ್ರಿಗೆ ಕ್ಷಮೆ ಕೇಳ್ತಿನಿ. ನೂರು ಕಾಲ ಚೆನ್ನಾಗಿ ಬದುಕಿ, ಅವರ ತಂದೆ ತಾಯಿಗೂ ಕ್ಷಮೆ ಕೇಳ್ತಿನಿ. ನಾನೇ ಹೋಗಿ ಅವ್ರಿಗೆ ಪ್ರಪೋಸ್ ಮಾಡಿದ್ದೀನಿ ಎಂದು ತಪ್ಪೊಪಿಕೊಂಡು ಸುದ್ದಿಗೋಷ್ಠಿಯಿಂದ ಹೊರನಡೆದರು.
Advertisement
ಇದನ್ನೂ ಓದಿ: ಹುಚ್ಚ ವೆಂಕಟ್ ಲವ್ ಸ್ಟೋರಿಗೆ ಟ್ವಿಸ್ಟ್: ನಿಜಕ್ಕೂ ಫಿನಾಯಿಲ್ ಕುಡಿದಿದ್ರಾ ವೆಂಕಟ್?
https://www.youtube.com/watch?v=HgMY_Dst6Nc