ಪ್ಲೀಸ್.. ನಮ್ಮಿಬ್ಬರನ್ನು ದೂರ ಮಾಡ್ಬೇಡಿ- ಎರಡನೇ ಮದ್ವೆಯಾಗಿ ಹುಚ್ಚ ವೆಂಕಟ್ ಮನವಿ

Public TV
1 Min Read
huccha venkat

ಬೆಂಗಳೂರು: ಸ್ಯಾಂಡಲ್‍ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೊಂದು ಮದುವೆಯಾಗಿದ್ದಾರೆ. ಈ ಕುರಿತು ಫೇಸ್‍ಬುಕ್ ಲೈವ್‍ನಲ್ಲಿ ಸ್ವತಃ ಹುಚ್ಚ ವೆಂಕಟ್ ತಿಳಿಸಿದ್ದಾರೆ.

ನಾನು ಮತ್ತೊಂದು ಮದುವೆ ಆಗಿರುವುದಾಗಿ ಸ್ವತಃ ಹುಚ್ಚ ವೆಂಕಟ್ ಫೇಸ್‍ಬುಕ್ ಲೈವ್ ಬಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ. ಹುಚ್ಚ ವೆಂಕಟ್ ಅವರು ಐಶ್ವರ್ಯ ಎಂಬ ಯುವತಿ ಜೊತೆ ಮದುವೆಯಾಗಿದ್ದಾರೆ. ವೆಂಕಟ್ ನಟಿಸಿ ನಿರ್ದೇಶನ ಮಾಡುತ್ತಿರುವ `ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ಕಾಣಿಸಿಕೊಂಡಿದ್ದಾರೆ.

huccha Venkat 5

ಕಳೆದ ವಾರ ತಲಕಾವೇರಿಯಲ್ಲಿ ನಾನು ಐಶ್ವರ್ಯರನ್ನು ಮದುವೆ ಆದೆ. ಮದುವೆ ಆದ ನಂತರ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹಾಗಾಗಿ ಮದುವೆ ಆದ ವಿಷಯವನ್ನು ನಾವು ಮನೆಯವರಿಂದ ಹಾಗೂ ಎಲ್ಲರಿಂದ ಮುಚ್ಚಿಟ್ಟಿದ್ದೀವಿ ಎಂದು ಹುಚ್ಚ ವೆಂಕಟ್ ತಮ್ಮ ಫೇಸ್‍ಬುಕ್ ಲೈವ್ ನಲ್ಲಿ ತಿಳಿಸಿದ್ದಾರೆ.

Huccha Venkat 4

ನಾನು ಐಶ್ವರ್ಯ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆ ಆಗಿರೋದು. ಪ್ರೀತಿಸಿ ಮದುವೆಯಾಗಿರುವುದರಿಂದ ಮನೆಯಲ್ಲಿ ವಿರೋಧವಿದೆ. ಐಶ್ವರ್ಯ ಬೇರೆ ಯಾರೂ ಅಲ್ಲ. ಆಕೆ ಡಿಕ್ಟೇಟರ್ ಹುಚ್ಚ ವೆಂಕಟ್ ಚಿತ್ರದ ನಾಯಕಿ. ನಮ್ಮ ಮದುವೆ ಆದ ಮೇಲೆ ಮನೆಯವರ ಆರ್ಶೀವಾದ ತೆಗೆದುಕೊಳ್ಳಲು ಫೋನ್ ಮಾಡಿದೆ. ಆಗ ದೊಡ್ಡಮ್ಮ ತೀರಿಕೊಂಡ ವಿಚಾರ ತಿಳಿಯಿತು. ಹಾಗಾಗಿ ಮದುವೆ ವಿಷಯ ಹೇಳುವುದು ಬೇಡವೆಂದು ಸುಮ್ಮನಿದ್ದೆ ಎಂದು ಹುಚ್ಚ ವೆಂಕಟ್ ಹೇಳಿದರು.

huccha venkat 2

ನಮ್ಮಿಬ್ಬರನ್ನು ದೂರ ಮಾಡ್ಬೇಡಿ: ನಾವಿಬ್ಬರೂ ಮದುವೆಯಾಗಿ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಹಾಗೂ ಆಕೆಯನ್ನು ತುಂಬ ಪ್ರೀತಿಸ್ತೀನಿ. ಅವಳು ಕೂಡ ನನ್ನನ್ನು ತುಂಬಾನೇ ಪ್ರೀತಿಸುತ್ತಾಳೆ. ನಾವು ಯಾವುದೇ ತಪ್ಪು ಮಾಡಿಲ್ಲ. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೀವಿ ಹಾಗೂ ನಾವಿಬ್ಬರು ಮೇಜರ್. ಬಲವಂತವಾಗಿ ನಾವು ಮದುವೆಯಾಗಿಲ್ಲ. ನಮ್ಮಿಬ್ಬರನ್ನು ದೂರ ಮಾಡಬೇಡಿ ಎಂದು ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ.

ಜನವರಿ 3, 2007ರಲ್ಲಿ ಹುಚ್ಚ ವೆಂಕಟ್ ಅವರು ಲಾವಣ್ಯ(ಹೆಸರು ಬದಲಾಯಿಸಲಾಗಿದೆ)ಎಂಬವರ ಜೊತೆ ಸಂಪಂಗಿರಾಮನಗರ ಗಣಪತಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು.

https://www.youtube.com/watch?v=BYtOx0DvZqU

Huccha Venkat 3

Share This Article
Leave a Comment

Leave a Reply

Your email address will not be published. Required fields are marked *